×
Ad

2016ರಿಂದ 2018: ಉಗ್ರರ ದಾಳಿಯಲ್ಲಿ 31 ಯೋಧರ ಸಾವು; ಸರಕಾರದ ಮಾಹಿತಿ

Update: 2019-12-09 23:43 IST

ಹೊಸದಿಲ್ಲಿ, ಡಿ.9: ಗಡಿ ನಿಯಂತ್ರಣ ರೇಖೆಯಲ್ಲಿ 2016ರಿಂದ 2018ರ ಅವಧಿಯಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ 31 ಯೋಧರು ಹತರಾಗಿದ್ದಾರೆ ಎಂದು ಸರಕಾರ ಸೋಮವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
 2016ರಲ್ಲಿ ಉಗ್ರರ ದಾಳಿಯಲ್ಲಿ 6 ಯೋಧರು ಮೃತರಾಗಿದ್ದರೆ, 2017ರಲ್ಲಿ 13 ಮತ್ತು 2018ರಲ್ಲಿ 12 ಯೋಧರು ಮೃತರಾಗಿದ್ದಾರೆ ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ರಕ್ಷಣಾ ಇಲಾಖೆಯ ಸಹಾಯಕ ಸಚಿವ ಶ್ರೀಪಾದ ನಾಯ್ಕ್ ಲಿಖಿತ ರೂಪದಲ್ಲಿ ತಿಳಿಸಿದರು.
ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಯಲು ಮತ್ತು ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಎಲ್ಲಾ ಮುಂಚೂಣಿ ನೆಲೆಗಳನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸದೃಢಗೊಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News