ದಕ್ಷಿಣ ಏಶ್ಯನ್ ಗೇಮ್ಸ್: ಚಿನ್ನ ಬಾಚಿಕೊಂಡ ಭಾರತ ಕಬಡ್ಡಿ ತಂಡ

Update: 2019-12-10 07:02 GMT

ಕಠ್ಮಂಡು, ಡಿ.9: ಭಾರತೀಯ ಕಬಡ್ಡಿ ತಂಡ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಅವಳಿ ಚಿನ್ನದ ಸಂಭ್ರಮ ಆಚರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಪುರುಷರ ಹಾಗೂ ಮಹಿಳಾ ತಂಡಗಳು ಶ್ರೀಲಂಕಾ ಹಾಗೂ ನೇಪಾಳವನ್ನು ಮಣಿಸಿ ಚಿನ್ನ ಬಾಚಿಕೊಂಡವು.

ಭಾರತ ಪುರುಷರ ತಂಡ ಶ್ರೀಲಂಕಾವನ್ನು ಫೈನಲ್‌ನಲ್ಲಿ 51-18 ಅಂಕಗಳ ಅಂತರದಿಂದ ಮಣಿಸಿತು. ನಿತೀಶ್ ಕುಮಾರ್, ವಿಶಾಲ್ ಭಾರದ್ವಾಜ್, ಸುನೀಲ್ ಕುಮಾರ್, ಪರ್ವೇಶ್ ಬೈನ್ಸ್‌ವಾಲ್, ನವೀನ್ ಕುಮಾರ್, ಪವನ್ ಶೆರಾವತ್ ಹಾಗೂ ದೀಪಕ್ ನಿವಾಸ್‌ಹೂಡ ಭಾರತದ ಗೆಲುವಿಗೆ ಕಾಣಿಕೆ ನೀಡಿದರು. ಹೂಡಾ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡದ ನಾಯಕತ್ವವಹಿಸಿಕೊಂಡಿದ್ದರು.

ಭಾರತದ ಮಹಿಳಾ ತಂಡ ಆತಿಥೇಯ ನೇಪಾಳವನ್ನು 50-13 ಅಂಕಗಳ ಅಂತರದಿಂದ ಸೋಲಿಸಿತು. ರಿತು ಕುಮಾರಿ, ನಿಶಾ, ಪುಷ್ಪಾ, ಸಾಕ್ಷಿ ಕುಮಾರ್, ಪ್ರಿಯಾಂಕಾ, ರಿತು ನೇಗಿ ಹಾಗೂ ದೀಪಿಕಾ ಹೆನ್ರಿ ಜೋಸೆಫ್ ತಂಡದ ಗೆಲುವಿಗೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News