ವೈಟ್ ಐಲ್ಯಾಂಡ್ ಜ್ವಾಲಾಮುಖಿ: ಮೃತರ ಸಂಖ್ಯೆ 6ಕ್ಕೆ

Update: 2019-12-10 16:57 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಡಿ. 10: ನ್ಯೂಝಿಲ್ಯಾಂಡ್‌ನ ವೈಟ್ ಐಲ್ಯಾಂಡ್‌ನಲ್ಲಿರುವ ಜ್ವಾಲಾಮುಖಿ ಪರ್ವತ ಸ್ಫೋಟದಿಂದಾಗಿ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ.

ಮಂಗಳವಾರ ರಾತ್ರಿಯ ವೇಳೆಗೆ, ಮೃತರ ಸಂಖ್ಯೆ ಆರು ಎಂದು ಪೊಲೀಸರು ತಿಳಿಸಿದರು. ಜ್ವಾಲಾಮುಖಿ ಸ್ಫೋಟದಲ್ಲಿ 24 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂಬುದಾಗಿ ಸೋಮವಾರ ಪೊಲೀಸರು ಹೇಳಿದ್ದರು. ಗಾಯಾಳುವೊಬ್ಬರು ನ್ಯೂಝಿಲ್ಯಾಂಡ್ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ಬಳಿಕ ಮೃತರ ಸಂಖ್ಯೆ ಆರಕ್ಕೇರಿದೆ.

ನ್ಯೂಝಿಲ್ಯಾಂಡ್ ತೀರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಜ್ವಾಲಾಮುಖಿ ದ್ವೀಪದಲ್ಲಿ ಸೋಮವಾರ ಅಪರಾಹ್ನ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಆ ವೇಳೆಗೆ ದ್ವೀಪದಲ್ಲಿ ಸುಮಾರು 50ರಷ್ಟು ಪ್ರವಾಸಿಗರು ಇದ್ದರು.

ಜ್ವಾಲಾಮುಖಿ ಸ್ಫೋಟಗೊಂಡು ಗಂಟೆಗಳೇ ಕಳೆದರೂ ರಕ್ಷಣಾ ಕಾರ್ಯಾಚರಣೆಗಾಗಿ ದ್ವೀಪದ ಒಳಗೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಪ್ರವೇಶಿಸುವುದು ಈಗಲೂ ಅಪಾಯಕಾರಿಯೇ ಆಗಿದೆ.

ಜ್ವಾಲಾಮುಖಿ ಸ್ಫೋಟದ ಬಳಿಕ 8 ಮಂದಿ ನಾಪತ್ತೆಯಾಗಿದ್ದಾರೆ. ಅವರು ಮೃತಪಟ್ಟಿರಬಹುದು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News