ತಾಲಿಬಾನ್‌ಗೆ ಪಾಕ್ ಆಶ್ರಯ ನಿರಾಕರಿಸಿರೆ ಅಫ್ಘಾನ್ ಯುದ್ಧಕ್ಕೆ ಶೀಘ್ರ ಕೊನೆ: ಅಮೆರಿಕ ಸೆನೆಟರ್

Update: 2019-12-10 17:01 GMT

ವಾಶಿಂಗ್ಟನ್, ಡಿ. 10: ಪಾಕಿಸ್ತಾನವು ತಾಲಿಬಾನ್‌ಗಳಿಗೆ ನೀಡುತ್ತಿರುವ ಸುರಕ್ಷಿತ ಆಶ್ರಯತಾಣಗಳನ್ನು ನಿರಾಕರಿಸಿದರೆ, ಅಫ್ಘಾನಿಸ್ತಾನ ಯುದ್ಧವು ಕೆಲವೇ ವಾರಗಳಲ್ಲಿ ಮುಗಿಯುತ್ತದೆ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್ ಲಿಂಡ್ಸೇ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.

ಯುದ್ಧವನ್ನು ನಿಲ್ಲಿಸುವ ವಿಚಾರದಲ್ಲಿ ತಾಲಿಬಾನ್ ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸುವ ಬದಲು ಪಾಕಿಸ್ತಾನದೊಂದಿಗೆ ವ್ಯವಹರಿಸಿ ಎಂದು ಅವರು ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಅಮೆರಿಕವು ತಾಲಿಬಾನ್ ಜೊತೆಗಿನ ಮಾತುಕತೆಯನ್ನು ಖತರ್‌ನಲ್ಲಿ ಶನಿವಾರ ಪುನರಾರಂಭಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸೆನೆಟರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘ತಾಲಿಬಾನ್‌ನೊಂದಿಗೆ ಮಾತುಕತೆ ನಡೆಸುವ ವಿಚಾರದಲ್ಲಿ ನಾವು ತಪ್ಪು ಮಾಡುತ್ತಿದ್ದೇವೆ. ಈ ವಿಷಯದಲ್ಲಿ ನಾವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂದು ನನಗೆ ಅನಿಸುತ್ತಿದೆ. ತಾಲಿಬಾನಿಗಳಿಗೆ ಪಾಕಿಸ್ತಾನದಲ್ಲಿ ಸುರಕ್ಷಿತ ಆಶ್ರಯ ತಾಣಗಳನ್ನು ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ, ಅಫ್ಘಾನಿಸ್ತಾನದಲ್ಲಿನ ಯುದ್ಧ ಕೇವಲ ವಾರಗಳಲ್ಲಿ ಕೊನೆಗೊಳ್ಳುತ್ತದೆ’’ ಎಂದು ಸೋಮವಾರ ಫಾಕ್ಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News