ಫ್ಲೋರಿಡಾದಲ್ಲಿ ಸೌದಿ ಅರೇಬಿಯಾದ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ಸ್ಥಗಿತ

Update: 2019-12-11 06:25 GMT

ವಾಷಿಂಗ್ಟನ್, ಡಿ.11:  ಸೌದಿ ವಾಯುಪಡೆಯ ಅಧಿಕಾರಿಯೊಬ್ಬರು ಶುಕ್ರವಾರ ಗುಂಡು ಹಾರಿಸಿ ಅಮೆರಿಕದ ಮೂವರನ್ನು ಕೊಂದಿರುವ ಪ್ರಕರಣದ ಬಳಿಕ ಫ್ಲೋರಿಡಾದ ಮೂರು ನೆಲೆಗಳಲ್ಲಿ 300 ಕ್ಕೂ ಹೆಚ್ಚು ಸೌದಿ ಅರೇಬಿಯಾದ ವಿದ್ಯಾರ್ಥಿಗಳಿಗೆ ವಿಮಾನ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಎಸ್ ನೌಕಾಪಡೆ ಮಂಗಳವಾರ ತಿಳಿಸಿದೆ.

ಈ ವಾರ ಮತ್ತೆ ತರಗತಿ ತರಬೇತಿ ಪ್ರಾರಂಭವಾಗಲಿದ್ದು, ಇತರ ವಿದ್ಯಾರ್ಥಿಗಳಿಗೆ ವಿಮಾನ ತರಬೇತಿ ಪುನರಾರಂಭಗೊಳ್ಳಲಿದೆ ಎಂದು ನೇವಿ ಕಮಾಂಡರ್ ಕ್ಲೇ ಡಾಸ್ ತಿಳಿಸಿದ್ದಾರೆ.

ಆದರೆ ಉತ್ತರ ಫ್ಲೋರಿಡಾದ ಮೂರು ನೆಲೆಗಳಲ್ಲಿರುವ ಸೌದಿ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಗೆ ತರಬೇತಿಯನ್ನು ನಿರ್ಬಂಧಿಸಬೇಕೆಂದು ನೌಕಾಪಡೆ ಸೋಮವಾರ ಸಂಜೆ ಆದೇಶಿಸಿದೆ.

ಶೂಟಿಂಗ್ ಸಂಭವಿಸಿದ ಪೆನ್ಸಕೋಲಾ ನೌಕಾ ವಾಯು ನಿಲ್ದಾಣದಲ್ಲಿ 140 ವಿದ್ಯಾರ್ಥಿಗಳಿಗೆ ಮತ್ತು ಹತ್ತಿರದ ವೈಟಿಂಗ್ ಫೀಲ್ಡ್ನಲ್ಲಿ 35 ವಿದ್ಯಾರ್ಥಿಗಳ ತರಬೇತಿ ಮೇಲೆ ಪರಿಣಾಮ ಬೀರಿದೆ.

ಅಟ್ಲಾಂಟಿಕ್ ಸಮುದ್ರ ತೀರದಲ್ಲಿರುವ ನೇವಲ್ ಏರ್ ಸ್ಟೇಷನ್ ಮೇಪೋರ್ಟ್ನಲ್ಲಿ ಇನ್ನೂ 128 ವಿದ್ಯಾರ್ಥಿಗಳನ್ನು ನಿರ್ಬಂಧಿಸಲಾಗಿದೆ.

ಶೂಟಿಂಗ್‌ನ ಆಘಾತದಿಂದ ಅವರು ಚೇತರಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸುವ ಪ್ರಯತ್ನವಾಗಿದೆ ಎಂದು ಡಾಸ್ ಹೇಳಿದ್ದಾರೆ,  ಗುಂಡಿನ ದಾಳಿಯಿಂದಾಗಿ  ಅಮೆರಿಕದ ಮೂವರು ಯೋಧರು  ಸಾವಿಗೀಡಾಗಿದ್ದರು.  ಇತರ ಎಂಟು ಮಂದಿ ಗಾಯಗೊಂಡಿದ್ದರು. ಪೊಲೀಸರು ಸೌದಿ ಶೂಟರ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News