ಲಾ ಲಿಗ ರಾಯಭಾರಿ ಆಗಿ ರೋಹಿತ್ ಶರ್ಮಾ

Update: 2019-12-12 17:20 GMT

ಮುಂಬೈ, ಡಿ.12: ಸ್ಪಾನೀಶ್ ಫುಟ್ಬಾಲ್ ಲೀಗ್ ಲಾಲಿಗ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾರನ್ನು ಭಾರತದಲ್ಲಿ ತನ್ನ ರಾಯಭಾರಿಯನ್ನಾಗಿ ನೇಮಿಸಿದೆ. ರೋಹಿತ್ ಲಾಲಿಗದಿಂದ ಜಾಗತಿಕವಾಗಿ ಬ್ರಾಂಡ್ ರಾಯಭಾರಿ ಆಗಿ ನೇಮಕಗೊಂಡ ಮೊದಲ ಫುಟ್ಬಾಲ್‌ಯೇತರ ಕ್ರೀಡಾಪಟು ಆಗಿದ್ದಾರೆ. ‘‘ಭಾರತದಲ್ಲಿ ಫುಟ್ಬಾಲ್ ಕ್ರೀಡೆ ಜಾಗತಿಕವಾಗಿ ಬೆಳೆಯುತ್ತಿದೆ. ಅದನ್ನು ‘ನಿದ್ರಿಸುತ್ತಿರುವ ದೈತ್ಯ’ಎಂದು ಪರಿಗಣಿಸಲು ಸಾಧ್ಯವಿಲ್ಲ. ಭಾರತದಲ್ಲಿ ಫುಟ್ಬಾಲ್ ಮೇಲಿನ ಆಸಕ್ತಿಯು ಕಳೆದ 5 ವರ್ಷಗಳಿಂದ ಗಣನೀಯ ಹೆಚ್ಚಳವಾಗಿರುವುದನ್ನು ನಾವು ನೋಡಿದ್ದೇವೆ. ನಮ್ಮಿಂದಿಗಿರುವ ಪ್ರತಿಯೊಬ್ಬರಿಗೂ ಅದರಲ್ಲೂ ಮುಖ್ಯವಾಗಿ ಅಭಿಮಾನಿಗಳಿಗೆ ಶ್ರೇಯಸ್ಸು ಸಲ್ಲಿಸಬೇಕಾಗಿದೆ’’ ಎಂದು ರೋಹಿತ್ ಪ್ರತಿಕ್ರಿಯಿಸಿದರು.

 ‘‘ಲಾ ಲಿಗದೊಂದಿಗೆ ಕೈಜೋಡಿಸಲು ನನಗೆ ಅತೀವ ಆನಂದವಾಗುತ್ತಿದೆ. ತಳಸ್ತರದ ಕಾರ್ಯಕ್ರಮದ ಮೂಲಕ ಭಾರತೀಯ ಫುಟ್ಬಾಲ್‌ನ ಪರಿಸರಸ್ನೇಹಿ ವ್ಯವಸ್ಥೆಗೆ ಸ್ಪೇನ್‌ನ ದೈತ್ಯ ಫುಟ್ಬಾಲ್ ಲೀಗ್ ಪ್ರವೇಶಿಸುತ್ತಿರುವುದು ಉತ್ತೇಜನಕಾರಿ ಅಂಶವಾಗಿದೆ. ವೈಯಕ್ತಿಕವಾಗಿ ಲಾಲಿಗದೊಂದಿಗೆ ಸೊಗಸಾದ ಪಂದ್ಯದೊಳಗೆ ನನ್ನ ಪಯಣ ಆಸಕ್ತಿದಾಯಕ. ಭಾರತದ ಫುಟ್ಬಾಲ್ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಎದುರು ನೋಡುತ್ತಿದ್ದೇನೆ’’ ಎಂದು ರೋಹಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News