ಡೋಪಿಂಗ್ ಪ್ರಕರಣ: ಶೂಟರ್ ರವಿ ಕುಮಾರ್, ಇತರ ನಾಲ್ವರಿಗೆ ನಿಷೇಧ

Update: 2019-12-13 06:06 GMT

ಹೊಸದಿಲ್ಲಿ, ಡಿ.13: ಹಲವು ಡೋಪಿಂಗ್ ಅಪರಾಧ ಎಸೆಗಿದ ಆರೋಪದಲ್ಲಿ ಮೂವರು ವೇಟ್‌ಲಿಫ್ಟರ್‌ಗಳು, ಬಾಕ್ಸರ್ ಹಾಗೂ ಶೂಟರ್‌ನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ)ಎರಡರಿಂದ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದೆ.

 ವಿಶ್ವಕಪ್ ವಿಜೇತ ರೈಫಲ್ ಶೂಟರ್ ರವಿ ಕುಮಾರ್ ತನ್ನ ದೇಹದಲ್ಲಿ ನಿಷೇಧಿತ ದ್ರವ್ಯ ಪತ್ತೆಯಾದ ಬಗ್ಗೆ ಮನವರಿಕೆ ಮಾಡಿಕೊಡಲು ವಿಫಲವಾದ ಕಾರಣ ನಾಡಾದ ಉದ್ದೀಪನ ಮದ್ದು ನಿಗ್ರಹ ಶಿಸ್ತು ಸಮಿತಿ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ಮೈಗ್ರೇನ್‌ಗೋಸ್ಕರ ನಾನು ಔಷಧಿಯನ್ನು ಸ್ವೀಕರಿಸಿದ್ದೆ ಎಂದು 29ರ ಹರೆಯದ ರವಿ ಹೇಳಿದ್ದರು.

2017ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ವೇಟ್‌ಲಿಫ್ಟರ್ ಸೀಮಾ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ. ಸೀಮಾ ದೇಹದಲ್ಲಿ ನಿಷೇಧಿತ ದ್ರವ್ಯ ಇರುವುದು ಪತ್ತೆಯಾಗಿತ್ತು.

ಪೆನಾಂಗ್ ಜೂನಿಯರ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್-2016ರ ಚಿನ್ನದ ವಿಜೇತ ವೇಟ್‌ಲಿಫ್ಟರ್ ಪೂರ್ಣಿಮಾ ಪಾಂಡೆ ಅವರಿಗೆ ನಾಡಾ 2 ವರ್ಷ ನಿಷೇಧ ವಿಧಿಸಿದೆ.

ಇನ್ನೋರ್ವ ವೇಟ್‌ಲಿಫ್ಟರ್ ಮುಕುಲ್ ಶರ್ಮಾ ನಾಲ್ಕು ವರ್ಷಗಳ ಕಾಲ ನಿಷೇದಕ್ಕೆ ಒಳಗಾಗಿದ್ದರೆ, ಬಾಕ್ಸರ್ ದೀಪಕ್ ಶರ್ಮಾ(91ಕೆಜಿ)ಎರಡು ವರ್ಷ ಅವಧಿಗೆ ನಿಷೇಧಕ್ಕೆ ಗುರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News