‘ರೇಪ್ ಇನ್ ಇಂಡಿಯಾ’ ಹೇಳಿಕೆಗಾಗಿ ರಾಹುಲ್ ವಿರುದ್ಧ ದೇಶದ್ರೋಹ ಪ್ರಕರಣ

Update: 2019-12-13 18:13 GMT

ಇಂದೋರ್ (ಮ.ಪ್ರ),ಡಿ.13: ಸಾಮಾಜಿಕ ಕಾರ್ಯಕರ್ತ ಮುಕೇಶ ರಾಜಾವತ್ ಎನ್ನುವವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ರೇಪ್ ಇನ್ ಇಂಡಿಯಾ’ ಹೇಳಿಕೆಗಾಗಿ ಶುಕ್ರವಾರ ಇಲ್ಲಿಯ ನ್ಯಾಯಾಲಯದಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ನ್ಯಾಯಾಲಯವು ಅದನ್ನು ಭೋಪಾಲದಲ್ಲಿರುವ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ರವಾನಿಸಿದೆ.

ಗುರುವಾರ ಜಾರ್ಖಂಡ್‌ನ ಗಡಾ ಎಂಬಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ವೇಳೆ ತನ್ನ ‘ರೇಪ್ ಇನ್ ಇಂಡಿಯಾ ’ಹೇಳಿಕೆಯ ಮೂಲಕ ರಾಹುಲ್ ಜನರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ ಎಂದು ರಾಜಾವತ್ ದೂರಿನಲ್ಲಿ ಹೇಳಿದ್ದಾರೆ.

ರಾಹುಲ್ ಹೇಳಿಕೆಯು ಹೆಚ್ಚಿನ ಜನರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಷ್ಟೇ ಅಲ್ಲ,ಅದು ದೇಶದ್ರೋಹ ಪ್ರಕರಣಕ್ಕೂ ಅರ್ಹವಾಗಿದೆ. ರಾಹುಲ್ ಜನಾಂಗ,ಧರ್ಮ,ಪ್ರದೇಶದ ವಿರುದ್ಧ ತನ್ನ ಹೇಳಿಕೆಗಳ ಮೂಲಕ ಈ ದೇಶದ ಸಾಮಾಜಿಕ ಸ್ವರೂಪವನ್ನು ಹಾಳುಗೆಡವಲು ಮತ್ತು ದೇಶದ ಭ್ರಾತೃತ್ವಕ್ಕೆ ಹಾನಿಯನ್ನುಂಟು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News