ಬ್ರಿಟನ್: ಈ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಮಹಿಳೆಯರು ಆಯ್ಕೆ

Update: 2019-12-14 16:10 GMT

ಲಂಡನ್, ಡಿ. 14: ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ಮಹಾ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಮಹಿಳೆಯರು ಆಯ್ಕೆಯಾಗಿದ್ದಾರೆ. ಆದರೆ, ಸಮಾನ ಪ್ರಾತಿನಿಧ್ಯದತ್ತ ಸಾಗುವ ನಮ್ಮ ವೇಗವನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಮಹಿಳಾ ಹಕ್ಕುಗಳ ಪ್ರತಿಪಾದಕರು ಹೇಳಿದ್ದಾರೆ.

ಬ್ರಿಟನ್‌ನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನ 650 ಸ್ಥಾನಗಳ ಪೈಕಿ 220 ಸ್ಥಾನಗಳಲ್ಲಿ ಮಹಿಳೆಯರು ಗೆದ್ದಿದ್ದಾರೆ. ಇದರೊಂದಿಗೆ ಬ್ರಿಟನ್‌ನ ಒಟ್ಟು ಸಂಸದರ ಪೈಕಿ (ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯರು ಸೇರಿ) ಮಹಿಳೆಯರ ಸಂಖ್ಯೆ ಮೂರನೇ ಒಂದಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಕಳೆದ ಬಾರಿಯ ಹೌಸ್ ಆಫ್ ಕಾಮನ್ಸ್‌ನಲ್ಲಿ 208 ಮಹಿಳೆಯರು ಆಯ್ಕೆಯಾಗಿದ್ದರು.

‘‘ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಯ್ಕೆಯಾಗಿರುವುದು ಸಂತೋಷದ ವಿಷಯ. ಆದರೆ, ನಾವು 32 ಶೇಕಡದಿಂದ ಕೇವಲ 34 ಶೇಕಡದತ್ತ ನಿಧಾನಗತಿಯಲ್ಲಿ ಸಾಗಿದ್ದೇವೆ. ಇನ್ನು ಸಮಾನ ಅಧಿಕಾರಕ್ಕಾಗಿ ನಾವು ಮುನ್ನಡೆಯಬೇಕಾಗಿದೆ’’ ಎಂದು ಮಹಿಳೆಯರ ಹಕ್ಕುಗಳ ಗುಂಪು ‘ಫಾಸೆಟ್ ಸೊಸೈಟಿ’ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಯಾಮ್ ಸ್ಮೆಥರ್ಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News