ಪೌರತ್ವ ಕಾಯ್ದೆ ಬಗ್ಗೆ ಕ್ರಿಸ್‌ಮಸ್ ಬಳಿಕ ಚರ್ಚಿಸೋಣ: ಮೇಘಾಲಯ ಸಿಎಂಗೆ ಅಮಿತ್ ಶಾ ಭರವಸೆ

Update: 2019-12-19 07:01 GMT

ಹೊಸದಿಲ್ಲಿ, ಡಿ.15: ಪೌರತ್ವ ಕಾಯ್ದೆಯ ಬಗ್ಗೆ ಮೇಘಾಲಯ ರಾಜ್ಯದವರಿಗೆ ಇರುವ ಕಳವಳವನ್ನು ಅರ್ಥ ಮಾಡಿಕೊಂಡಿದ್ದೇನೆ. ಕ್ರಿಸ್‌ಮಸ್ ಬಳಿಕ ಬಿಡುವು ಮಾಡಿಕೊಂಡು ಬಂದು ಭೇಟಿ ಮಾಡುವಂತೆ ಮೇಘಾಲಯದ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾರಿಗೆ ಹೇಳಿದ್ದೇನೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾ, ಮೆಘಾಲಯದಲ್ಲಿರುವ ಸಮಸ್ಯೆಯ ಬಗ್ಗೆ ಸಂಗ್ಮಾಜಿ ಮತ್ತವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ಯಾವುದೇ ಸಮಸ್ಯೆಯಿಲ್ಲ ಎಂದವರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದೆ. ಆದರೂ ಕಾಯ್ದೆಯಲ್ಲಿ ಬದಲಾವಣೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ. ಆದ್ದರಿಂದ ಕ್ರಿಸ್‌ಮಸ್ ಬಳಿಕ ಬಿಡುವಾದಾಗ ಬಂದು ಭೇಟಿ ಮಾಡಿ. ಮೇಘಾಲಯದ ಸಮಸ್ಯೆಗೆ ರಚನಾತ್ಮಕ ಪರಿಹಾರ ರೂಪಿಸಬಹುದು. ಭೀತಿ ಪಡುವ ಅಗತ್ಯವಿಲ್ಲವೆಂದು ಸಂಗ್ಮಾಜಿಗೆ ಹೇಳಿದ್ದೇನೆ ಎಂದರು. ಪೌರತ್ವ ಮಸೂದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಈಶಾನ್ಯ ರಾಜ್ಯಗಳಲ್ಲಿ ಮೇಘಾಲಯವೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News