ಪೌರತ್ವ ಕಾಯ್ದೆ: ದೇಶಾದ್ಯಂತ ಜನಜಾಗೃತಿ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ

Update: 2019-12-19 07:01 GMT

ಹೊಸದಿಲ್ಲಿ,ಡಿ.15: ಪೌರತ್ವ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ವ್ಯಾಪಕವಾಗಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ, ಈ ಮಸೂದೆಯ ಕುರಿತು ಜನಜಾಗೃತಿ ಮೂಡಿಸಲು ರಾಷ್ಟ್ರವ್ಯಾಪಿಯಾಗಿ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ಬಿಜೆಪಿ ರವಿವಾರ ಘೋಷಿಸಿದೆ ಹಾಗೂ ಈ ಮಸೂದೆಯು ಮುಸ್ಲಿಮರು ಅಥವಾ ಇತರ ಯಾವುದೇ ಸಮುದಾಯದ ವಿರುದ್ಧ ತಾರತಮ್ಯವನ್ನು ಮಾಡುತ್ತಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

ಧಾರ್ಮಿಕ ದೌರ್ಜನ್ಯದಿಂದ ಪಾರಾಗಲು ಭಾರತಕ್ಕೆ ವಲಸೆ ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ಪಡೆಯಲು ಅವಕಾಶವನ್ನು ನೀಡುವ ಈ ಮಸೂದೆಯ ಬಗ್ಗೆ ಜನತೆಗೆ ಮಾಹಿತಿ ನೀಡಲು ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಜನಜಾಗೃತಿ ಅಭಿಯಾನ ನಡೆಸಲಿದ್ದಾರೆಂದು ಪಕ್ಷದ ವಕ್ತಾರ ಸಂಬಿತ್ ಪಾತ್ರ ತಿಳಿಸಿದ್ದಾರೆ.

 ‘‘ ನಮ್ಮ ಮುಸ್ಲಿಂ ಸೋದರರು ಹಾಗೂ ಸೋದರಿಯರ ಒಂದೇ ಒಂದು ಹಕ್ಕನ್ನು ಕಸಿದುಕೊಳ್ಳುವಂತಹ ಯಾವುದೇ ಕಾನೂನು ಈ ಮಸೂದೆಯಲ್ಲಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ದಬ್ಬಾಳಿಕೆಗಳಿಂದ ಪಾರಾಗಲು ಭಾರತಕ್ಕೆ ವಲಸೆ ಬಂದು .ಯಾವುದೇ ಹಕ್ಕುಗಳಿಂದ ವಂಚಿತರಾಗಿರುವವರಿಗೆ ಹಕ್ಕುಗಳನ್ನಷ್ಟೇ ಈ ಮಸೂದೆಯಡಿ ಒದಗಿಸಲಾಗುತ್ತದೆ’ ಎಂದು ಪಾತ್ರ ತಿಳಿಸಿದ್ದಾರೆ. ಜನಜಾಗೃತಿ ಅಭಿಯಾನ ಆರಂಭಿಸುವ ಮುನ್ನ 11 ರಾಜ್ಯಗಳ ಪದಾಧಿಕಾರಿಗಳಿಗೆಪೌರತ್ವ ಕಾಯ್ದೆಯನ್ನು ವಿವರಿಸಲಾಗುವುದು ಎಂದವರು ಹೇಳಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News