ಕೊಲ್ಲಿಯಲ್ಲಿ ಅಮೆರಿಕ ಸೇನೆಯ ಉಪಸ್ಥಿತಿಯಿಂದ ವಿಪತ್ತು: ಇರಾನ್ ಸಚಿವ

Update: 2019-12-16 17:28 GMT

ಟೆಹರಾನ್ (ಇರಾನ್), ಡಿ. 16: ಕೊಲ್ಲಿ ವಲಯದಲ್ಲಿ ಅಮೆರಿಕ ಸೇನೆಯ ಉಪಸ್ಥಿತಿಯು ‘ವಿಪತ್ತು’ಗಳಿಗೆ ಕಾರಣವಾಗಿದೆ ಹಾಗೂ ಉಗ್ರವಾದವನ್ನು ಬೆಳೆಸಲು ಸಹಾಯ ಮಾಡಿದೆ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ರವಿವಾರ ಹೇಳಿದ್ದಾರೆ.

‘‘ಕೊಲ್ಲಿಯಲ್ಲಿರುವ ಅಸಮಾನತೆ ಮತ್ತು ಮುಗಿಯದ ವೈಷಮ್ಯಗಳನ್ನು ಕೆಲವು ಜಾಗತಿಕ ವ್ಯಕ್ತಿಗಳು ತಮ್ಮ ಸೇನಾ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ಹೆಚ್ಚು ಶಸ್ತ್ರಗಳನ್ನು ಮಾರಾಟ ಮಾಡಲು ಒದಗಿರುವ ಉತ್ತಮ ಅವಕಾಶ ಎಂಬಂತ ಬಳಸಿಕೊಳ್ಳುತ್ತಾರೆ’’ ಎಂದು ಅವರು ದೋಹಾದಲ್ಲಿ ಹೇಳಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಕೊಲ್ಲಿ ವಲಯದಲ್ಲಿ ವಿದೇಶಿ ಪಡೆಗಳ ಉಪಸ್ಥಿತಿಯು ಭದ್ರತೆಯನ್ನು ಒದಗಿಸಲು ವಿಫಲವಾಗಿದೆ ಹಾಗೂ ವಿಪತ್ತುಗಳನ್ನು ಮಾತ್ರ ಸೃಷ್ಟಿಸಿದೆ ಎಂದು ಝಾರಿಫ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News