ಚೀನಾ ಪ್ರಧಾನಿಯನ್ನು ಭೇಟಿಯಾದ ಹಾಂಕಾಂಗ್ ಮುಖ್ಯಾಧಿಕಾರಿ
Update: 2019-12-16 23:01 IST
ಹಾಂಕಾಂಗ್, ಡಿ. 16: ಹಾಂಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಸೋಮವಾರ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ರನ್ನು ಭೇಟಿಯಾದರು.
ಹಾಂಕಾಂಗ್‌ನಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರಜಾಪ್ರಭುತ್ವಪರ ಧರಣಿಗಳು ಈಗಲೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ. ರವಿವಾರ ರಾತ್ರಿಯೂ ಹಾಂಕಾಂಗ್‌ನಲ್ಲಿ ಸರಕಾರ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಸಂಭವಿಸಿದೆ.
‘‘ಹಾಂಕಾಂಗ್ ಇನ್ನೂ ಪ್ರತಿಭಟನೆಯ ದಾರಿಯಿಂದ ಹೊರಬಂದಿಲ್ಲ’’ ಎಂದು ಲ್ಯಾಮ್ ಜೊತೆಗಿನ ಮಾತುಕತೆಯ ವೇಳೆ ಕೆಕಿಯಾಂಗ್ ಹೇಳಿದರು ಎಂದು ಕೇಬಲ್ ಟಿವಿ ವರದಿ ಮಾಡಿದೆ.