ಸ್ಯಾಮ್ಸಂಗ್ ಅಧ್ಯಕ್ಷ, ಉಪಾಧ್ಯಕ್ಷರಿಗೆ 18 ತಿಂಗಳು ಜೈಲು

Update: 2019-12-18 16:09 GMT

ಸಿಯೋಲ್ (ದಕ್ಷಿಣ ಕೊರಿಯ), ಡಿ. 18: ಕಾರ್ಮಿಕ ಸಂಘದ ಚಟುವಟಿಕೆಗಳನ್ನು ಹತ್ತಿಕ್ಕಿರುವುದಕ್ಕಾಗಿ ಜಗತ್ತಿನ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮತ್ತು ಚಿಪ್ ತಯಾರಕ ಕಂಪೆನಿ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್‌ನ ಅಧ್ಯಕ್ಷರಿಗೆ ಇಲ್ಲಿನ ನ್ಯಾಯಾಲಯವೊಂದು ಬುಧವಾರ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಿಗೇ ಕಂಪೆನಿಯು ತನ್ನ ತಪ್ಪಿಗಾಗಿ ಕ್ಷಮೆ ಕೋರಿದೆ.

ಸ್ಯಾಮ್ಸಂಗ್‌ನ ಗ್ರಾಹಕ ಸೇವೆ ವಿಭಾಗದ ಸಿಬ್ಬಂದಿ ಕಾರ್ಮಿಕ ಸಂಘದ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಲು ರೂಪಿಸಲಾದ ಬೃಹತ್ ಕಾರ್ಯಾಚರಣೆಯೊಂದರ ನೇತೃತ್ವ ವಹಿಸಿಕೊಂಡಿರುವುದಕ್ಕಾಗಿ ಅಧ್ಯಕ್ಷ ಲೀ ಸಾಂಗ್-ಹೂನ್ ಮತ್ತು ಕಾರ್ಯಕಾರಿ ಉಪಾಧ್ಯಕ್ಷ ಕಾಂಗ್ ಕ್ಯುಂಗ್-ಹೂನ್ ಇಬ್ಬರಿಗೂ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಲೀ ಮತ್ತು ಕಾಂಗ್ ಕಾರ್ಮಿಕ ಸಂಘದ ಕಾನೂನುಗಳನ್ನು ಉಲ್ಲಂಘಿಸಿರುವುದನ್ನು ಸಿಯೋಲ್‌ನ ಸೆಂಟ್ರಲ್ ಡಿಸ್ಟ್ರಿಕ್ಟ್ ನ್ಯಾಯಾಲಯವು ಮಂಗಳವಾರ ಎತ್ತಿಹಿಡಿಯಿತು.

ವಿಚಾರಣೆಯ ವೇಳೆ ಜಾಮೀನಿನಲ್ಲಿದ್ದ ಸ್ಯಾಮ್ಸಂಗ್ ಮುಖ್ಯಸ್ಥರನ್ನು ತೀರ್ಪು ಪ್ರಕಟಗೊಂಡ ಬಳಿಕ ಪೊಲೀಸರು ವಶಕ್ಕೆ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News