ಅಭಿವೃದ್ಧಿಶೀಲ ದೇಶಗಳು ಸಾಲದ ಸುಳಿಯಲ್ಲಿ: ವಿಶ್ವಬ್ಯಾಂಕ್

Update: 2019-12-20 17:07 GMT

ವಾಶಿಂಗ್ಟನ್, ಡಿ. 20: ಅಭಿವೃದ್ದಿ ಹೊಂದುತ್ತಿರುವ ದೇಶಗಳು ಹೊಂದಿರುವ ಸಾಲ ಕಳೆದ ಐದು ದಶಕಗಳ ಯಾವುದೇ ಅವಧಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ ಹಾಗೂ ಅದು ಇನ್ನೊಂದು ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ವಬ್ಯಾಂಕ್ ಗುರುವಾರ ಎಚ್ಚರಿಸಿದೆ.

ಒಂದು ವೇಳೆ ಸಾಲದ ಪೂರೈಕೆ ನಿಂತರೆ ಅದು ಇನ್ನೂ ಅನಾಹುತಕಾರಿಯಾಗುತ್ತದೆ. ಯಾಕೆಂದರೆ, ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿರುವ ಈ ಸಂದರ್ಭದಲ್ಲಿ ಸರಕಾರಿ ಹಣಕಾಸು ಸಂಸ್ಥೆಗಳ ಜೊತೆಗೆ ಖಾಸಗಿ ಲೇವಾದೇವಿಗಾರರೂ ಕಣಕ್ಕಿಳಿಯುತ್ತಾರೆ ಎಂದು ವಿಶ್ವಬ್ಯಾಂಕ್‌ನ ನೂತನ ವರದಿಯೊಂದು ತಿಳಿಸಿದೆ.

‘‘ಪ್ರಸಕ್ತ ಸಾಲದ ಗಾತ್ರ, ವೇಗ ಮತ್ತು ವ್ಯಾಪ್ತಿಯಿಂದ ನಾವೆಲ್ಲರೂ ಕಳವಳಪಡಬೇಕಾಗಿದೆ’’ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮ್ಯಾಲ್ಪಾಸ್ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News