×
Ad

ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಕರಿಪತಾಕೆ ಪ್ರದರ್ಶಿಸಿದ ಜಾಧವ್ ಪುರ್ ವಿವಿ ವಿದ್ಯಾರ್ಥಿಗಳು

Update: 2019-12-24 13:24 IST

ಕೋಲ್ಕತಾ, ಡಿ.24: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖರ್ ಅವರಿಗೆ ಜಾಧವ್ ಪುರ್  ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಕರಿ  ಪತಾಕೆ ಪ್ರದರ್ಶಿಸಿದ ಘಟನೆ ವರದಿಯಾಗಿದೆ.  

ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ  ವಿರೋಧಿಸಿ ನಡೆಯುತ್ತಿರುವ ಚಳವಳಿಯ ಹಿನ್ನೆಲೆಯಲ್ಲಿ  ರಾಜ್ಯಪಾಲರು  ಮಧ್ಯಾಹ್ನ 2 ಗಂಟೆ ಸುಮಾರಿಗೆ ಕ್ಯಾಂಪಸ್‌ನ ಮುಖ್ಯ ದ್ವಾರವನ್ನು ತಲುಪಿದಾಗ ಅವರ ಕಾರನ್ನು ಸುತ್ತುವರಿದು ಘೋಷಣೆಗಳನ್ನು ಕೂಗಿದರು.

ಸಿಪಿಐ (ಎಂ) ಬೆಂಬಲಿತ ಎಸ್‌ಎಫ್‌ಐ, ಆರ್ಟ್ಸ್ ಫ್ಯಾಕಲ್ಟಿ ಸ್ಟೂಡೆಂಟ್ಸ್ ಯೂನಿಯನ್ (ಎಎಫ್‌ಎಸ್‌ಯು), ಎಐಎಸ್ಎ ಮತ್ತು ಫೆಟ್ಸು ಪ್ರತಿಭಟನೆಗಳ ನಡುವೆ ರಾಜ್ಯಪಾಲರು ಸುಮಾರು 30 ನಿಮಿಷಗಳ ಕಾಲ ಸಿಲುಕಿಕೊಂಡರು.

ಉಪಕುಲಪತಿ ಸುರಂಜನ್ ದಾಸ್ ಮತ್ತು ವಿವಿಯ ಇತರ  ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಅವರನ್ನು ಅರಬಿಂದೋ ಭವನದಲ್ಲಿ ಸಭೆಯ ಸ್ಥಳಕ್ಕೆ ಕರೆದೊಯ್ಯಲಾಯಿತು.

ಅಲ್ಲಿ ಸುಮಾರು 300 ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಒಳಹೋಗುವುದಕ್ಕೆ ಅಡ್ಡಿಪಡಿಸಿದಾಗ  "ಪರಿಸ್ಥಿತಿಯಿಂದಾಗಿ ನಿಮ್ಮ ವೃತ್ತಿಜೀವನವು ಪರಿಣಾಮ ಬೀರಬೇಕೆಂದು ನಾನು ಬಯಸುವುದಿಲ್ಲ. ನಿಮ್ಮೊಂದಿಗೆ ಚರ್ಚಿಸಲು ಮತ್ತು ಒಂದು ಮಾರ್ಗವನ್ನು ಕಂಡುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ಎಂದಿಗೂ ವಿದ್ಯಾರ್ಥಿಗಳ ಮಾತನ್ನು ಕೇಳದ ರಾಜ್ಯಪಾಲನಲ್ಲ" ಎಂದು ಅವರು  ಅಭಿಪ್ರಾಯಪಟ್ಟರು.

 ದಿಲ್ಲಿ  ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕ್ಯಾಂಪಸ್‌ನಲ್ಲಿ ಪೊಲೀಸ್ ದೌರ್ಜನ್ಯ ದ ಬಗ್ಗೆ ಕುರಿತು ವಿದ್ಯಾರ್ಥಿಗಳು ಅವರನ್ನು ಪ್ರಶ್ನಿಸಿದಾಗ, "ನಾನು ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿದ್ದೇನೆ ಮತ್ತು ರಾಜ್ಯದ ಕುರಿತ ಪ್ರಶ್ನೆಗಳಿಗೆ ನಾನು ಉತ್ತರಿಸಬಲ್ಲೆ" ಎಂದು ಧನ್ಖರ್ ಹೇಳಿದರು.

ಸಂಜೆ 4.10 ರ ಸುಮಾರಿಗೆ ಸಭೆಯಿಂದ ಹೊರಟು ಹೋಗುವಾಗಲೂ  ವಿದ್ಯಾರ್ಥಿಗಳು  ಅಡ್ಡಿಪಡಿಸಿದರು.

 ಈ ಮೊದಲು ವಿವಿಯು  ಘಟಿಕೋತ್ಸವವನ್ನು  ರದ್ದುಗೊಳಿಸಿತು, ಅಲ್ಲಿ ಧನ್ಖರ್ ಅವರು ಡಿ.ಲಿಟ್ ಮತ್ತು ಡಿ.ಎಸ್.ಸಿ  ಪದವಿಯನ್ನು ನೀಡಬೇಕಾಗಿತ್ತು. ಇದೀಗ ಸರಳ ಸಮಾರಂಭದಲ್ಲಿ  ವಿದ್ಯಾರ್ಥಿಗಳಿಗೆ ಮಾತ್ರ ಪದವಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು   ಎಂದು ಜೆಯು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News