×
Ad

ಗುಜರಾತ್: 16 ವರ್ಷಗಳಲ್ಲಿ 180 ಕಸ್ಟಡಿ ಸಾವುಗಳು; ಒಬ್ಬ ಪೊಲೀಸನಿಗೂ ಶಿಕ್ಷೆಯಾಗಿಲ್ಲ

Update: 2019-12-24 23:14 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.24: ಗುಜರಾತನಲ್ಲಿ 2001 ಮತ್ತು 2016ರ ನಡುವೆ 180 ವ್ಯಕ್ತಿಗಳು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ,ಆದರೆ ಈ ಪ್ರಕರಣಗಳಲ್ಲಿ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿಗೆ ಈವರೆಗೂ ಶಿಕ್ಷೆಯಾಗಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ ಅಂಕಿಅಂಶಗಳಂತೆ ಈ ಅವಧಿಯಲ್ಲಿ ಕಸ್ಟಡಿ ಸಾವುಗಳು ಸಂಭವಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ (362) ಮತ್ತು ಆಂಧ್ರಪ್ರದೇಶ (242) ಮೊದಲ ಎರಡು ಸ್ಥಾನಗಳಲ್ಲಿವೆ.

 ಈ ಅವಧಿಯಲ್ಲಿ ದೇಶಾದ್ಯಂತ ಒಟ್ಟು 1,557 ಕಸ್ಟಡಿ ಸಾವುಗಳು ಸಂಭವಿಸಿವೆ. ಈ ಸಂಬಂಧ ಪೊಲೀಸರ ವಿರುದ್ಧ 704 ಪ್ರಕರಣಗಳು ದಾಖಲಾಗಿದ್ದು,188 ಪ್ರಕರಣಗಳೊಂದಿಗೆ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ಆದರೆ ಗುಜರಾತ್‌ನಲ್ಲಿ ಪೊಲೀಸರ ವಿರುದ್ಧ ಕೇವಲ 26 ಪ್ರಕರಣಗಳು ದಾಖಲಾಗಿದ್ದು,10 ಪ್ರಕರಣಗಳಲ್ಲಿ ಮಾತ್ರ ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ. ಈವರೆಗೆ ಯಾವುದೇ ಪೊಲಿಸ್ ಸಿಬ್ಬಂದಿ ದೋಷನಿರ್ಣಯಕ್ಕೊಳಗಾಗಿಲ್ಲ.

ಈ ಮಧ್ಯೆ ಕಳೆದ ನವಂಬರ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಅಸಾಧಾರಣ ಸೇವೆಗಾಗಿ 168 ಪೊಲೀಸರಿಗೆ ಪದಕಗಳನ್ನು ಪ್ರದಾನಿಸಿದ್ದಾರೆ. ಇದರಲ್ಲಿ ಮಾಜಿ ಡಿಜಿಪಿ ಹಾಗೂ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದ ಆರೋಪಿ ಪಿ.ಪಿ.ಪಾಂಡೆ ಅವರೂ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News