4 ವರ್ಷಗಳ ಬಳಿಕ ಸಾನಿಯಾ ಫೆಡರೇಶನ್‌ಕಪ್ ತಂಡಕ್ಕೆ ವಾಪಸ್

Update: 2019-12-24 18:38 GMT

ಹೊಸದಿಲ್ಲಿ, ಡಿ.24: ಭಾರತದ ಟೆನಿಸ್ ಡಬಲ್ಸ್ ತಾರೆ ಸಾನಿಯಾ ಮಿರ್ಝಾ ಅವರು ನಾಲ್ಕು ವರ್ಷಗಳ ನಂತರ ಇಂಡಿಯನ್ ಫೆಡರೆಶನ್ ಕಪ್ ತಂಡಕ್ಕೆ ಮರಳಿದ್ದಾರೆ.

ಸಾನಿಯಾ ಕೊನೆಯ ಬಾರಿಗೆ ಫೆಡರೇಶನ್ ಕಪ್‌ನಲ್ಲಿ 2016ರಲ್ಲಿ ಆಡಿದ್ದರು ಐದು ಸದಸ್ಯರ ತಂಡದಲ್ಲಿ ಸೈನಾ ಸ್ಥಾನ ಪಡೆದಿದ್ದಾರೆ ತಂಡದಲ್ಲಿ ದೇಶದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಇದ್ದಾರೆ. ರಿಯಾ ಭಾಟಿಯಾ (379), ರುತುಜಾ ಭೋಸಲೆ (466) ಮತ್ತು ಕರ್ಮನ್ ಕೌರ್ ಥಾಂಡಿ (568) ತಂಡದಲ್ಲಿರುವ ಇತರ ಆಟಗಾರರು. ಡಬ್ಲ್ಯೂಟಿಎ ಸಿಂಗಲ್ಸ್ ಪಟ್ಟಿಯಲ್ಲಿ ಅಂಕಿತಾ 180 ನೇ ಸ್ಥಾನದಲ್ಲಿದ್ದಾರೆ. ಮಾಜಿ ಡೇವಿಸ್ ಕಪ್ ಆಟಗಾರ ವಿಶಾಲ್ ಉಪ್ಪಲ್ ಅವರು ತಂಡದ ನಾಯಕರಾಗಲಿದ್ದು, ಅಂಕಿತಾ ಭಾಂಬ್ರಿ ಅವರನ್ನು ತಂಡದ ಕೋಚ್ ಆಗಿ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಸೌಜನ್ಯ ಬವಿಸೆಟ್ಟಿ ಅವರನ್ನು ರಿಸರ್ವ್ ಪ್ಲೇಯರ್ ಆಗಿ ನೇಮಕ ಮಾಡಲಾಗಿದೆ. ಇದೀಗ ವಿಶ್ವದ 38ನೇ ಸ್ಥಾನದಲ್ಲಿರುವ ಉಕ್ರೇನ್‌ನ ನಾಡಿಯಾ ಕಿಚೆನೋಕ್ ಅವರೊಂದಿಗೆ ಹೋಬಾರ್ಟ್ ಇಂಟರ್‌ನ್ಯಾಷನಲ್‌ನಲ್ಲಿ ಸಾನಿಯಾ ವಾಪಸಾಗಲಿದ್ದಾರೆ. ಸಾನಿಯಾ ಆರು ಡಬಲ್ಸ್ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇದರಲ್ಲಿ ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News