ಇದ್ಲಿಬ್‌ನಲ್ಲಿ ರಕ್ತಪಾತ ನಿಲ್ಲಿಸಿ : ಸಿರಿಯ, ರಶ್ಯ, ಇರಾನ್ ಸರಕಾರಗಳಿಗೆ ಟ್ರಂಪ್ ಕರೆ

Update: 2019-12-28 04:47 GMT

ವಾಶಿಂಗ್ಟನ್, ಡಿ. 27: ಸಿರಿಯದ ಬಂಡುಕೋರ ನಿಯಂತ್ರಣದ ಇದ್ಲಿಬ್ ಪ್ರಾಂತದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯ, ಸಿರಿಯ ಮತ್ತು ಇರಾನ್ ಸರಕಾರಗಳಿಗೆ ಗುರುವಾರ ಕರೆ ನೀಡಿದ್ದಾರೆ.

ಇದ್ಲಿಬ್‌ನಲ್ಲಿರುವ ಬಂಡುಕೋರರ ಮೇಲೆ ಈ ಮೂರು ದೇಶಗಳು ಜಂಟಿಯಾಗ ನಡೆಸುತ್ತಿರುವ ದಾಳಿಯಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

  ಸಿರಿಯ ಸೈನಿಕರು ರಶ್ಯ ಮತ್ತು ಇರಾನ್ ದೇಶಗಳ ಸೈನಿಕರ ನೆರವಿನೊಂದಿಗೆ ಈ ಬಂಡುಕೋರ ಪ್ರಾಬಲ್ಯದ ಪ್ರಾಂತದಲ್ಲಿ ನಡೆಸುತ್ತಿರುವ ಬಾಂಬ್ ದಾಳಿಗಳು ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ. ಆಗಸ್ಟ್‌ನಲ್ಲಿ ಜಾರಿಗೆ ಬಂದಿರುವ ಯುದ್ಧವಿರಾಮ ಮತ್ತು ಉದ್ವಿಗ್ನತೆಯನ್ನು ತಗ್ಗಿಸುವಂತೆ ವಿಶ್ವಸಂಸ್ಥೆ ಮಾಡಿರುವ ಮನವಿಗಳ ಹೊರತಾಗಿಯೂ, ಸಿರಿಯ ಸರಕಾರಿ ಪಡೆಗಳು ನಿರಂತರವಾಗಿ ಮುನ್ನುಗ್ಗುತ್ತಿವೆ.

‘‘ಬಂಡುಕೋರ ನಿಯಂತ್ರಣದ ಇದ್ಲಿಬ್‌ನಲ್ಲಿ ರಶ್ಯ, ಸಿರಿಯ ಮತ್ತು ಇರಾನ್‌ಗಳು ಸಾವಿರಾರು ಜನರನ್ನು ಕೊಲ್ಲುತ್ತಿವೆ ಅಥವಾ ಕೊಲ್ಲಲು ಹೋಗುತ್ತಿವೆ. ಹಾಗೆ ಮಾಡಬೇಡಿ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News