3-4 ವರ್ಷ ಖಿನ್ನತೆಯಿಂದ ಬಳಲುತ್ತಿದ್ದ ಗ್ರೆಟಾ ತನ್‌ಬರ್ಗ್: ತಂದೆ

Update: 2019-12-30 16:37 GMT
file photo

ಲಂಡನ್, ಡಿ. 30: ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ತನ್ನ ಪರಿಸರ ಹೋರಾಟವನ್ನು ಆರಂಭಿಸುವ ಮೊದಲು ಮೂರು-ನಾಲ್ಕು ವರ್ಷಗಳ ಕಾಲ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ತಂದೆ ಸ್ವಾಂಟ್ ತನ್‌ಬರ್ಗ್ ಹೇಳಿದ್ದಾರೆ.

‘‘ತನ್‌ಬರ್ಗ್ ಈಗ ತುಂಬಾ ಪ್ರಸಿದ್ಧಳಾಗಿದ್ದಾಳೆ ಹಾಗೂ ವಿಶಿಷ್ಟಳಾಗಿದ್ದಾಳೆ. ಅವಳು ಈಗ ಸಾಮಾನ್ಯ ಹುಡುಗಿಯಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ, ನನಗೆ ಈಗ ಅವಳು ಸಾಮಾನ್ಯ ಮಕ್ಕಳಂತಾಗಿದ್ದಾಳೆ. ಯಾಕೆಂದರೆ ಇತರರು ಏನು ಮಾಡಬಹುದೋ ಅದನ್ನು ಅವಳು ಈಗ ಮಾಡಬಲ್ಲವಳಾಗಿದ್ದಾಳೆ’’ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘‘ಅವಳು ಮಾತನಾಡುವುದನ್ನು ನಿಲ್ಲಿಸಿದಳು, ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು. ಬಳಿಕ ಅವಳು ತಿನ್ನಲೂ ನಿರಾಕರಿಸಿದಳು. ಇದು ಹೆತ್ತವರಾದ ನಮಗೆ ದುಃಸ್ವಪ್ನವಾಗಿತ್ತು’’ ಎಂದರು.

‘‘ಈಗ ಅವಳು ನೃತ್ಯ ಮಾಡುತ್ತಾಳೆ, ತುಂಬಾ ನಗುತ್ತಾಳೆ, ನಾವು ಆನಂದವಾಗಿದ್ದೇವೆ. ಈಗ ಅವಳು ಉತ್ತಮ ಜಾಗದಲ್ಲಿದ್ದಾಳೆ’’ ಎಂದು ಸ್ವಾಂಟ್ ತನ್‌ಬರ್ಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News