ಅಮೆರಿಕದ ಗುಪ್ತಚರ ಮಾಹಿತಿ ಆಧಾರದಲ್ಲಿ ರಶ್ಯದಲ್ಲಿ ಉಗ್ರ ದಾಳಿ ತಡೆ

Update: 2019-12-30 18:11 GMT

ಮಾಸ್ಕೋ, ಡಿ. 30: ಅಮೆರಿಕ ನೀಡಿದ ಸುಳಿವುಗಳ ಆಧಾರದಲ್ಲಿ ರಶ್ಯದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಲಾಗಿದೆ ಎಂದು ರಶ್ಯ ರವಿವಾರ ತಿಳಿಸಿದೆ. ಈ ಸಂಬಂಧ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವೈಯಕ್ತಿಕ ಧನ್ಯವಾದವನ್ನು ಸಲ್ಲಿಸಿದ್ದಾರೆ.

ಅಮೆರಿಕ ನೀಡಿರುವ ಮಾಹಿತಿಗಳ ಆಧಾರದಲ್ಲಿ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ದಾಳಿಗಳನ್ನು ನಡೆಸಲು ಉದ್ದೇಶಿಸಿರುವ ಆರೋಪದಲ್ಲಿ ಇಬ್ಬರು ರಶ್ಯನ್ನರನ್ನು ಡಿಸೆಂಬರ್ 27ರಂದು ಬಂಧಿಸಲಾಗಿದೆ ಎಂದು ರಶ್ಯದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ)ನ್ನು ಉಲ್ಲೇಖಿಸಿ ರಶ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಅಮೆರಿಕದ ಗುಪ್ತಚರ ಸಂಸ್ಥೆಗಳು ನೀಡಿರುವ ಸುಳಿವುಗಳಿಗಾಗಿ ರಶ್ಯ ಅಧ್ಯಕ್ಷರು ರವಿವಾರ ಅಮೆರಿಕ ಅಧ್ಯಕ್ಷರಿಗೆ ಫೋನ್ ಮಾಡಿ ಧನ್ಯವಾದ ಸಲ್ಲಿಸಿದರು ಎಂದು ರಶ್ಯ ಸರಕಾರ ತಿಳಿಸಿದೆ. ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News