ಮರಣ ದಂಡನೆ ಆವೇಶದ ವಾದಗಳು ಮತ್ತು ವಾಸ್ತವ

Update: 2019-12-30 18:31 GMT

ಕಳೆದ ಶತಮಾನದ ಅನುಭವವನ್ನು ಒಂದು ಮಾರ್ಗದರ್ಶಿಯಾಗಿ ತೆಗೆದುಕೊಂಡಲ್ಲಿ, ಲೈಂಗಿಕ ಹಿಂಸೆಯನ್ನು ತಡೆಯುವ ಒಂದು ಕ್ರಮವಾಗಿ ವಿಫಲವಾಗಿದೆ. 1965ರಲ್ಲಿ ವಿಶ್ವದ ಕೇವಲ 23 ರಾಷ್ಟ್ರಗಳು ಮರಣದಂಡನೆಯನ್ನು ರದ್ದುಪಡಿಸಿದ್ದವು. ಆದರೆ, ಆ ಬಳಿಕ ಈ ರೀತಿಯ ಶಿಕ್ಷೆಯಲ್ಲಿ ವಿಶ್ವದ ಕ್ರಿಮಿನಲ್ ನ್ಯಾಯ ವ್ಯವಸ್ಥೆಗಳು ನಂಬಿಕೆ ಕಳೆದುಕೊಂಡವು. ಈಗ ವಿಶ್ವದ ಒಟ್ಟು ರಾಷ್ಟ್ರಗಳ ಮೂರನೇ ಎರಡಕ್ಕೂ ಹೆಚ್ಚು ರಾಷ್ಟ್ರಗಳು ಮರಣದಂಡನೆಗೆ ವಿದಾಯ ಹೇಳಿವೆ. ಆದರೆ ಭಾರತದಲ್ಲಿ ನಾವು ಪ್ರವಾಹದ ವಿರುದ್ಧ ಈಜಲು ನಿರಾಕರಿಸಿದ್ದೇವೆ.

ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಾಲ್ವರು ಅಪರಾಧಿಗಳ ಪರಾಮರ್ಷೆ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ, ಆ ನಾಲ್ವರು ಈಗ ನೇಣುಗಂಬಕ್ಕೆ ಇನ್ನಷ್ಟು ಹತ್ತಿರ ಸರಿದಂತಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ನಾಲ್ಕು ಮಂದಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂಬ ಸಾರ್ವಜನಿಕ ಹಕ್ಕೊತ್ತಾಯದ ಹಿಂದುಮುಂದನ್ನು ಹಾಗೂ ಮರಣದಂಡನೆಯಿಂದ ಎಷ್ಟರ ಮಟ್ಟಿಗೆ ಭವಿಷ್ಯದಲ್ಲಿ ನಡೆಯಬಹುದಾದ ಅಪರಾಧಗಳನ್ನು ತಡೆಯಬಹುದು ಎಂದು ವಿವೇಚಿಸುವುದು ಅಗತ್ಯವಾಗುತ್ತದೆ.

ಕಳೆದ ಶತಮಾನದ ಅನುಭವವನ್ನು ಒಂದು ಮಾರ್ಗದರ್ಶಿಯಾಗಿ ತೆಗೆದುಕೊಂಡಲ್ಲಿ, ಲೈಂಗಿಕ ಹಿಂಸೆಯನ್ನು ತಡೆಯುವ ಒಂದು ಕ್ರಮವಾಗಿ ವಿಫಲವಾಗಿದೆ. 1965ರಲ್ಲಿ ವಿಶ್ವದ ಕೇವಲ 23 ರಾಷ್ಟ್ರಗಳು ಮರಣದಂಡನೆಯನ್ನು ರದ್ದುಪಡಿಸಿದ್ದವು. ಆದರೆ, ಆ ಬಳಿಕ ಈ ರೀತಿಯ ಶಿಕ್ಷೆಯಲ್ಲಿ ವಿಶ್ವದ ಕ್ರಿಮಿನಲ್ ನ್ಯಾಯ ವ್ಯವಸ್ಥೆಗಳು ನಂಬಿಕೆ ಕಳೆದುಕೊಂಡವು. ಈಗ ವಿಶ್ವದ ಒಟ್ಟು ರಾಷ್ಟ್ರಗಳ ಮೂರನೇ ಎರಡಕ್ಕೂ ಹೆಚ್ಚು ರಾಷ್ಟ್ರಗಳು ಮರಣದಂಡನೆಗೆ ವಿದಾಯ ಹೇಳಿವೆ. ಆದರೆ ಭಾರತದಲ್ಲಿ ನಾವು ಪ್ರವಾಹದ ವಿರುದ್ಧ ಈಜಲು ನಿರಾಕರಿಸಿದ್ದೇವೆ.

ವಿಶ್ವದಾದ್ಯಂತ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷೆಯ ಸಿದ್ಧಾಂತದ ಪ್ರಕಾರ ಅಪರಾಧಿಗೆ ಶಿಕ್ಷೆ ನೀಡಲಾಗುತ್ತದೆ. ಇದು ಶತಮಾನಗಳ ಕಾಲದಿಂದ ಶಿಕ್ಷೆಯ ಮಟ್ಟಿಗೆ ಮುಖ್ಯಪಾತ್ರ ವಹಿಸಿದ ಅಭಿಜಾತ (ಕ್ಲಾಸಿಕಲ್) ಕಾನೂನು. ಇದರ ಪ್ರಕಾರ ಒಂದು ದೇಶವು ಅಪರಾಧಿಗೆ ನೀಡುವ ವ್ಯವಸ್ಥಿತ ಶಿಕ್ಷೆಯಲ್ಲಿ ನಾಲ್ಕು ಅಂಶಗಳು ಇರಲೇಬೇಕು.

ಮೊದಲನೆಯದು, ‘ಸಮಾಜದ ರಕ್ಷಣೆ’. ಮರಣದಂಡನೆ ವಿಧಿಸುವುದರಿಂದ, ಜೈಲು ಶಿಕ್ಷೆ ವಿಧಿಸುವುದಕ್ಕಿಂತ ಯಾವುದೇ ರೀತಿಯಲ್ಲೂ ಈ ಉದ್ದೇಶ ಈಡೇರುವುದಿಲ್ಲ. ಇದು ಮತ್ತೆ ಮತ್ತೆ ಸಾಬೀತಾಗಿದೆ. ಜೈಲು ಶಿಕ್ಷೆಗೊಳಗಾದವರು ಮರಣದಂಡನೆಗಾಗಿ ಕಾಯುತ್ತ ಜೈಲಿನಲ್ಲಿ ಯಾರಿಗೂ ಹಾನಿ ಮಾಡದೆ ದಶಕಗಳನ್ನು ಕಳೆದಿದ್ದಾರೆ. ಆದರೆ ಜೈಲಿನಲ್ಲಿ ಅವರಿಗೆ ಅಮಾನವೀಯವಾದ ಶಿಕ್ಷೆಯನ್ನು ನೀಡಿ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ.

ಎರಡನೆಯದಾಗಿ, ಕ್ರಿಮಿನಲ್ ಚಟುವಟಿಕೆಗಳಿಗೆ, ಅಪರಾಧಗಳನ್ನೆಸಗುವುದಕ್ಕೆ ಹಲವು ಅಂಶಗಳು ಕಾರಣವಾಗುತ್ತದೆ. ಅಪರಾಧ ಮಾಡದಂತೆ ತಡೆಯುವುದು, ಶಿಕ್ಷೆಯ ಭಯ ಆ ಅಂಶಗಳಲ್ಲಿ ಒಂದು ಮಾತ್ರ. ಜೀವಾವಧಿ ಶಿಕ್ಷೆಗಿಂತ ಮರಣದಂಡನೆ ಶಿಕ್ಷೆ ನೀಡಿದಲ್ಲಿ ಅದು ಕೊಲೆ ಮಾಡದಂತೆ ಅಪರಾಧಿಯನ್ನು ಬಹಳ ಹೆಚ್ಚೇನೂ ತಡೆದಿಲ್ಲವೆಂದು ವಿಶ್ವಸಂಸ್ಥೆಯ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಮರಣದಂಡನೆ ಒಂದು ಹಿಮ್ಮುಖ ಹೆಜ್ಜೆ ಮತ್ತು ಅದು ಕೊಲೆ ನಡೆಯದಂತೆ ತಡೆಯದಿರಬಹುದು ಎಂದು ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿ ಹೇಳಿದೆ.

ಮೂರನೆಯದಾಗಿ, ಅಪರಾಧಿಯ ಸುಧಾರಣೆ ಮತ್ತು ಪುನರ್ವಸತಿ ಎಂಬ ತತ್ವ ಮರಣದಂಡನೆ ನೀಡಿದಾಗ ತತ್‌ಕ್ಷಣವೇ ರದ್ದುಗೊಂಡಂತಾಗುತ್ತದೆ.

ಅಂತಿಮವಾಗಿ, ಉಳಿಯುವುದು: ಪ್ರತೀಕಾರದ ಪರಿಣಾಮ; ಆದರೆ ಮಾನವರಲ್ಲಿರುವ ಪ್ರತೀಕಾರದ ಆಸೆಗಾಗಿ ಒಬ್ಬ ವ್ಯಕ್ತಿಯ ಹತ್ಯೆ ಎಂದೂ ನಡೆಯಕೂಡದು. ಪ್ರತೀಕಾರ ಎಂಬುದು ಶಿಕ್ಷೆಯ ವೈಯಕ್ತಿಕವಾದ ಹಾಗೂ ಭಾವನಾತ್ಮಕವಾದ ಅಂಶ. ಇದು ಬಹಳ ಸಂದರ್ಭಗಳಲ್ಲಿ ಅಪರಾಧದ ಪ್ರಮಾಣಕ್ಕೆ / ತೀವ್ರತೆಗೆ ಸರಿಯಾಗಿ ಶಿಕ್ಷೆ ಎಂಬ ಬಗ್ಗೆ ನಮ್ಮನ್ನು ಕುರುಡಾಗಿಸುತ್ತದೆ.

 ಮರಣದಂಡನೆಗೆ ಗುರಿಯಾದವರ ತುಲನಾತ್ಮಕ ಅಧ್ಯಯನ ನಡೆಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ; ಈ ನಿಟ್ಟಿನಲ್ಲಿ ನ್ಯಾಯಾಲಯಗಳು ದುರ್ಬಲ ವರ್ಗಗಳ ವಿರುದ್ಧ ಪೂರ್ವಾಗ್ರಹ ಹೊಂದಿವೆ. ‘‘ಮರಣದಂಡನೆ ನಿಜವಾಗಿ ಅನುಷ್ಠಾನಗೊಂಡಾಗ ಅದು ತಾರತಮ್ಯ ಧೋರಣೆ ಅನುಸರಿಸುತ್ತದೆ; ಯಾಕೆಂದರೆ ಅದು ಬಹುತೇಕ ಬಡವರ ಹಾಗೂ ಅವಕಾಶ ವಂಚಿತರ ವಿರುದ್ಧವೇ ದಾಳಿ ನಡೆಸುತ್ತದೆ’’ ಎಂದು ನ್ಯಾಯಮೂರ್ತಿ ಪಿ.ಎಸ್. ಭಗವತಿ ಹೇಳಿದ್ದಾರೆ. ಈ ಜನರ ಪಾಲಿಗೆ ಕಾನೂನಿನ ನೆರವಿನ ಕೊರತೆಯು ಇದಕ್ಕೆ ಕಾರಣವಾಗಿದೆ; ಇತರ ಕಾರಣಗಳೂ ಇರುತ್ತವೆ. ತಪ್ಪಾಗಿ ಮರಣದಂಡನೆ ನೀಡಲಾಗಿರುವುದನ್ನು ‘ಮರಣದಂಡನೆ ಯೋಜನೆ’ ದೃಢಪಡಿಸಿದೆ. ಅಮೆರಿಕ ಒಂದರಲ್ಲೇ ಕಳೆದ ಶತಮಾನದಲ್ಲಿ 350ಕ್ಕೂ ಹೆಚ್ಚು ಮಂದಿಯನ್ನು ಅವರು ಮಾಡಿರದಿದ್ದ ಅಪರಾಧಗಳಿಗಾಗಿ ಮರಣದಂಡನೆಗೆ ಗುರಿಪಡಿಸಲಾಗಿತ್ತು.

ಆದ್ದರಿಂದ ಇತ್ತೀಚೆಗೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ಪಾಶವೀ ಹಿಂಸೆಯ ಹಿನ್ನೆಲೆಯಲ್ಲಿ, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ಸಾರ್ವಜನಿಕರ ಆಕ್ರೋಶಭರಿತ ಹಕ್ಕೊತ್ತಾಯಕ್ಕೆ ನ್ಯಾಯಾಂಗ ಶರಣಾಗದಿರುವುದು ಬಹಳ ಮುಖ್ಯವಾಗುತ್ತದೆ. ತುಂಬ ಅನಿವಾರ್ಯವೂ ಆಗುತ್ತದೆ. ಸಾರ್ವಜನಿಕರ ಆತಂಕ, ಆಕ್ರೋಶ ಮತ್ತು ಭಾವನೆಗಳು, ಭಾವೋದ್ರೇಕಗಳು ವಿವೇಕ, ಸರಿಯಾದ ಯೋಚನೆ (ರೀಸನ್) ಹಾಗೂ ತರ್ಕಕ್ಕೆ ಬದಲಿ ಆಗಲಾರವು. ನ್ಯಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂಬಂಧಿಸಿ ಕಾನೂನಿನ ಅನುಷ್ಠಾನ ವ್ಯವಸ್ಥೆ ಈಗ ಇರುವುದಕ್ಕಿಂತ ಉತ್ತಮವಾಗಬೇಕು, ನಿಜ; ಆದರೆ ಈ ಪ್ರಶ್ನೆಗಳಿಗೆ ಮರಣದಂಡನೆಯಿಂದ ಲೈಂಗಿಕ ಅಪರಾಧಗಳ ಸಮಸ್ಯೆ ಕೊನೆಗೊಳ್ಳುವುದಿಲ್ಲ.

(ಲೇಖಕರು ಸುಪ್ರೀಂ ಕೋರ್ಟ್‌ನ ನ್ಯಾಯವಾದಿ)

ಕೃಪೆ: ದಿ ಹಿಂದೂ

Writer - ಪ್ರಶಾಂತ್ ಸಿಂಗ್

contributor

Editor - ಪ್ರಶಾಂತ್ ಸಿಂಗ್

contributor

Similar News

ಜಗದಗಲ
ಜಗ ದಗಲ