ವಿಸ್ಡನ್ ದಶಕದ ಟ್ವೆಂಟಿ-20 ತಂಡದಲ್ಲಿ ವಿರಾಟ್ ಕೊಹ್ಲಿ ಬುಮ್ರಾ ಗೆ ಸ್ಥಾನ

Update: 2019-12-30 18:48 GMT

ಲಂಡನ್, ಡಿ.30: ವಿಸ್ಡನ್ ಘೋಷಿಸಿರುವ ದಶಕದ ಟ್ವೆಂಟಿ-20 ತಂಡದಲ್ಲಿ ಭಾರತದ ಕೇವಲ ಇಬ್ಬರು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ. ಅವರುಗಳೆಂದರೆ: ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರೀತ್ ಬುಮ್ರಾ.

ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ನೇತೃತ್ವದ ತಂಡಕ್ಕೆ ಎಂ.ಎಸ್. ಧೋನಿ ಅಥವಾ ರೋಹಿತ್ ಶರ್ಮಾಗೆ ಸ್ಥಾನ ನೀಡದಿರುವುದು ಅಚ್ಚರಿ ಉಂಟು ಮಾಡಿದೆ.

ದೇಶೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ದಾಖಲೆ ಕಳಪೆಯಾಗಿದೆ. ಆದರೆ, ಅಂತರ್‌ರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಇದು ತದ್ವಿರುದ್ಧ್ದವಾಗಿದೆ. ಕೊಹ್ಲಿ ದಶಕದಲ್ಲಿ 53 ಸರಾಸರಿ ಹೊಂದಿದ್ದಾರೆ. ಸ್ಥಿರ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಅವರ ಸ್ಟ್ರೈಕ್‌ರೇಟ್ ದರ ಅತ್ಯುತ್ತಮವಾಗಿದೆ ಎಂದು ವಿಸ್ಡನ್ ತಿಳಿಸಿದೆ.

ಕೊಹ್ಲಿ ಅವರು ಈಗಾಗಲೇ ವಿಸ್ಡನ್ ದಶಕದ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ವಿಸ್ಡನ್ ಘೋಷಿಸಿರುವ ದಶಕದ ಐವರು ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ನಾಯಕ ಕೊಹ್ಲಿ ಅವರು ಸ್ಟೀವ್ ಸ್ಮಿತ್, ಡೇಲ್ ಸ್ಟೇಯ್ನಿ, ಎಬಿ ಡಿವಿಲಿಯರ್ಸ್ ಹಾಗೂ ಎಲ್ಲಿಸ್ ಪೆರ್ರಿ ಅವರೊಂದಿಗೆ ಸ್ಥಾನ ಪಡೆದಿದ್ದಾರೆ.

 2016ರಲ್ಲಿ ಕ್ರಿಕೆಟಿಗೆ ಕಾಲಿಟ್ಟಿರುವ ಭಾರತದ ವೇಗದ ಬೌಲರ್ ಬುಮ್ರಾ, ರಕ್ಷಣಾತ್ಮಕ ಚಾಕಚಾಕ್ಯತೆಯ ಹಿನ್ನೆಲೆಯಲ್ಲಿ ದಶಕದ ಟ್ವೆಂಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬುಮ್ರಾ ಕುರಿತು ವಿಸ್ಡನ್ ಪ್ರತಿಕ್ರಿಯಿಸಿದೆ. ಬುಮ್ರಾ ಒಟ್ಟಾರೆ 6.71ರ ಎಕಾನಮಿ ರೇಟ್ ಹೊಂದಿದ್ದು, ಇದು ವಿಶ್ವದ ವೇಗದ ಬೌಲರ್‌ಗಳ ಪೈಕಿ ಡೇಲ್ ಸ್ಟೇಯ್ನಾ ಬಳಿಕ ಎರಡನೇ ಶ್ರೇಷ್ಠ ಎಕಾನಮಿ ದರವಾಗಿದೆ. ಡೆತ್ ಓವರ್‌ನಲ್ಲಿ ಹೆಚ್ಚಾಗಿ ಬೌಲಿಂಗ್ ಮಾಡುವ ಬುಮ್ರಾ ಅವರ ಎಕಾನಮಿ ರೇಟ್ 7.27ರಷ್ಟಿದೆ. ಇದು ವಿಶ್ವದಲ್ಲಿ 7ನೇ ಶ್ರೇಷ್ಠ ಸಾಧನೆಯಾಗಿದೆ ಎಂದು ವಿಸ್ಡನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News