×
Ad

ಗ್ರೀಕ್ ತೈಲ ಟ್ಯಾಂಕರ್ ಮೇಲೆ ದಾಳಿ; 8 ಸಿಬ್ಬಂದಿ ಅಪಹರಣ

Update: 2019-12-31 22:45 IST
ಸಾಂದರ್ಭಿಕ ಚಿತ್ರ

ಅಥೆನ್ಸ್ (ಗ್ರೀಸ್), ಡಿ. 31: ಕ್ಯಾಮರೂನ್‌ನ ಆರ್ಥಿಕ ರಾಜಧಾನಿ ಡೋವಾಲಕ್ಕೆ ಸಮೀಪದ ಸಮುದ್ರದಲ್ಲಿ ಶಸ್ತ್ರಧಾರಿ ವ್ಯಕ್ತಿಗಳು ಮಂಗಳವಾರ ಗ್ರೀಸ್ ದೇಶದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿ ಹಡಗಿನ ಕ್ಯಾಪ್ಟನ್ ಸೇರಿದಂತೆ 8 ಮಂದಿಯನ್ನು ಅಪಹರಿಸಿದ್ದಾರೆ ಎಂದು ಗ್ರೀಸ್‌ನ ಸಮುದ್ರಯಾನ ಸಚಿವಾಲಯ ಹೇಳಿದೆ.

ಲಿಂಬೆ ಸಮುದ್ರದಲ್ಲಿ ಲಂಗರು ಹಾಕಿದ್ದ ‘ಹ್ಯಾಪಿ ಲೇಡಿ’ ಹಡಗಿನಲ್ಲಿ 28 ಸಿಬ್ಬಂದಿಯಿದ್ದರು. ಆ ಪೈಕಿ ಐವರು ಗ್ರೀಕರು, ಇಬ್ಬರು ಫಿಲಿಪಿನೊಗಳು ಮತ್ತು ಓರ್ವ ಯುಕ್ರೇನಿಯನ್ ಸಿಬ್ಬಂದಿಯನ್ನು ದಾಳಿಕೋರರು ಅಪಹರಿಸಿದ್ದಾರೆ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಗ್ರೀಕ್ ರಾಷ್ಟ್ರೀಯ ಸಿಬ್ಬಂದಿಯೊಬ್ಬರು ಎಲ್ಲಿಂದಲೋ ಹಾರಿದ ಗುಂಡಿನಿಂದ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News