ಕಾನ್‍ಸ್ಟೇಬಲ್ ಕಾರು ಕದ್ದ ಎಸ್ಸೈ ಜೈಲುಪಾಲು

Update: 2020-01-01 10:08 GMT

ಮೊರಾದಾಬಾದ್: ಕಾನ್‍ಸ್ಟೇಬಲ್ ಒಬ್ಬರಿಗೆ ಸೇರಿದ ಕಾರನ್ನು ಕದ್ದ ಆರೋಪದ ಮೇಲೆ ಸಬ್ ಇನ್‍ಸ್ಪೆಕ್ಟರ್ ಒಬ್ಬರನ್ನು ಮಂಗಳವಾರ ಬಂಧಿಸಲಾಗಿದೆ. ತನ್ನ ಹಿರಿಯ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಕ್ಕಾಗಿ ಆರೋಪಿ ಸಚಿನ್ ದಯಾಳ್ ಎಂಬಾತನನ್ನು ಈ ಹಿಂದೆ ಸೇವೆಯಿಂದ ವಜಾಗೊಳಿಸಲಾಗಿತ್ತು.

"ಕದ್ದ ಕಾರಿನೊಂದಿಗೆ ಆತ ಸಾಗುತ್ತಿದ್ದಾಗ ಪೊಲೀಸರು ಆತನನ್ನು ತಡೆದು ನಿಲ್ಲಿಸಿದರೂ ಆತ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರು ಅಪಘಾತಕ್ಕೀಡಾಗಿತ್ತು. ನಂತರ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ,'' ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

"ನಾನು ಗೊಂದಲದಲ್ಲಿದ್ದೇನೆ ಹಾಗೂ ಖಿನ್ನನಾಗಿದ್ದೇನೆ. ಖಿನ್ನ ಜನರು ಇಂತಹ ಕೆಲಸ ಮಾಡುತ್ತಾರೆ,'' ಎಂದು ಆರೋಪಿ ಎಸ್ಸೈ ಸಬೂಬು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News