×
Ad

ಸೈರಸ್ ಮಿಸ್ತ್ರಿ ಮರುನೇಮಕ ಆದೇಶದ ವಿರುದ್ಧ ಟಾಟಾ ಸನ್ಸ್ ಸುಪ್ರೀಂ ಕೋರ್ಟಿಗೆ

Update: 2020-01-02 15:39 IST

ಹೊಸದಿಲ್ಲಿ: ಸೈರಸ್ ಮಿಸ್ತ್ರಿಯನ್ನು ಟಾಟಾ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯಲ್ಲಿ ಮರುಸ್ಥಾಪಿಸಿ ಕಳೆದ ತಿಂಗಳು ಕಂಪೆನಿ ಕಾನೂನು ನ್ಯಾಯಾಧೀಕರಣ-ಎನ್‍ಸಿಎಲ್‍ಎಟಿ  ಹೊರಡಿಸಿದ ಆದೇಶದ ವಿರುದ್ಧ ಟಾಟಾ ಸನ್ಸ್ ಇಂದು ಸುಪ್ರೀಂ ಕೋರ್ಟಿನ ಕದ ತಟ್ಟಿದೆ.

ಸೈರಸ್ ಮಿಸ್ತ್ರಿಯವರನ್ನು ಟಾಟಾ ಕಂಪೆನಿಯ ಕಾರ್ಯಾನಿರ್ವಾಹಕ ಹುದ್ದೆಯಿಂದ ಕಂಪೆನಿಯ ಬೋರ್ಡ್ ಮೀಟಿಂಗ್ ವೇಳೆ ವಜಾಗೊಳಿಸಿದ ನಾಟಕೀಯ ಬೆಳವಣಿಗೆ ನಡೆದ ಮೂರು ವರ್ಷದ ನಂತರ ಎನ್‍ಸಿಎಎಲ್‍ಟಿ ಅವರನ್ನು ಮರುಸ್ಥಾಪಿಸಿತ್ತು. ಮಿಸ್ತ್ರಿ ಅವರನ್ನು ಕೈಬಿಟ್ಟ ನಂತರ ರತನ್ ಟಾಟಾ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕಂಪೆನಿ ಕಾನೂನು ನ್ಯಾಯಾಧಿಕರಣದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಟಾಟಾ ಸನ್ಸ್ ತನ್ನ ಅಪೀಲಿನಲ್ಲಿ ಕೇಳಿಕೊಂಡಿದೆಯಲ್ಲದೆ, ಎನ್ ಚಂದ್ರಶೇಖರನ್ ಅವರನ್ನು ಕಂಪೆನಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೇಮಕಗೊಳಿಸಿರುವುದು ಅಕ್ರಮ ಎನ್ನುವ ನ್ಯಾಯಾಧಿಕರಣದ ನಿರ್ಧಾರಕ್ಕೂ ತಡೆಹೇರಬೇಕೆಂದು ಸಂಸ್ಥೆ ಕೋರಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News