ಖಾಸಗಿ ತರಬೇತಿ ವಿಮಾನ ಪತನ: ಇಬ್ಬರ ಮೃತ್ಯು

Update: 2020-01-04 03:46 GMT

ಭೋಪಾಲ್, ಜ.4: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಖಾಸಗಿ ವಿಮಾನಯಾನ ತರಬೇತಿ ಅಕಾಡಮಿಯ ವಿಮಾನವೊಂದು ಪತನಗೊಂಡು ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಚಿಮೆಸ್ ಅಕಾಡಮಿಗೆ ಸೇರಿದ ವಿಮಾನ ಧಾನಾ ಏರ್‌ಸ್ಟ್ರಿಪ್‌ನಲ್ಲಿ ಇಳಿಯುವ ಪ್ರಯತ್ನದಲ್ಲಿದ್ದಾಗ ಪಕ್ಕದ ಹೊಲದ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ಸಾಗರ್ ಜಿಲ್ಲಾ ಪೊಲೀಸ್ ಆಯುಕ್ತ ಅಮಿತ್ ಸಾಂಘಿ ಹೇಳಿದ್ದಾರೆ.

ತರಬೇತುದಾರ ಅಶೋಕ್ ಮಕ್ವಾನಾ (58) ಮತ್ತು ತರಬೇತಿ ಪಡೆಯುತ್ತಿದ್ದ ಪಿಯೂಶ್ ಸಿಂಗ್ (28) ಘಟನೆಯಲ್ಲಿ ಮೃತಪಟ್ಟವರು. ಅಪಘಾತಕ್ಕೆ ಪ್ರತಿಕೂಲ ಹವಾಮಾನ ಕಾರಣ ಎನ್ನಲಾಗಿದೆ. ದುರಂತವನ್ನು ಚಿಮೆಸ್ ಅಕಾಡಮಿ ಆಡಳಿತಾಧಿಕಾರಿ ರಾಹುಲ್ ಶರ್ಮಾ ದೃಢಪಡಿಸಿದ್ದಾರೆ.

ವಿಮಾನದ ತಾಂತ್ರಿಕ ವಿವರ ತಕ್ಷಣಕ್ಕೆ ಲಭ್ಯವಾಗಿಲ್ಲ. ಅಕಾಡಮಿಯ ವೆಬ್‌ಸೈಟ್ ಪ್ರಕಾರ ಈ ವಿಮಾನಯಾನ ಸಂಸ್ಥೆ ವಾಣಿಜ್ಯ ಪೈಲಟ್ ಲೈಸನ್ಸ್ ಹಾಗೂ ಖಾಸಗಿ ಪೈಲೆಟ್ ಲೈಸನ್ಸ್ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News