ಅಮೆರಿಕ ಸೈನಿಕರಿಂದ ಒಂದು ಕಿ.ಮೀ. ದೂರದಲ್ಲಿರಿ: ಇರಾಕ್ ಸೈನಿಕರಿಗೆ ಇರಾನ್ ಪರ ಗುಂಪು ಎಚ್ಚರಿಕೆ

Update: 2020-01-05 17:41 GMT

ಬಗ್ದಾದ್, ಜ. 5: ಸೇನಾ ನೆಲೆಗಳಲ್ಲಿ ಅಮೆರಿಕದ ಪಡೆಗಳಿಂದ ಅಂತರ ಕಾಪಾಡಿಕೊಳ್ಳಿ ಎಂದು ಇರಾಕ್‌ನ ಹಾಶಿದ್ ಅಲ್-ಶಾಬಿ ಸೇನಾ ಗುಂಪಿನಲ್ಲಿರುವ ತೀವ್ರವಾದಿ ಇರಾನ್ ಪರ ಬಣ ಕತೀಬ್ ಹಿಝ್ಬುಲ್ಲಾ ಶನಿವಾರ ಇರಾಕ್ ಸೈನಿಕರಿಗೆ ಎಚ್ಚರಿಕೆ ನೀಡಿದೆ.

‘‘ರವಿವಾರ ಸಂಜೆ 5 ಗಂಟೆಯ ಬಳಿಕ ಅಮೆರಿಕದ ನೆಲೆಗಳಿಂದ ಕನಿಷ್ಠ 1,000 ಮೀಟರ್ ದೂರದಲ್ಲಿ ಇರುವಂತೆ ಇರಾಕ್‌ನ ಭದ್ರತಾ ಪಡೆಗಳಿಗೆ ನಾವು ಸೂಚಿಸುತ್ತೇವೆ’’ ಎಂದು ಅದು ಹೇಳಿದೆ.

ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಅಮೆರಿಕದ ಸೈನಿಕರು ಇರುವ ಸೇನಾ ನೆಲೆಯೊಂದರ ಸಮೀಪ ಮೋರ್ಟರ್‌ಗಳು ಮತ್ತು ರಾಕೆಟ್‌ಗಳು ಅಪ್ಪಳಿಸಿದ ಬಳಿಕ ಈ ಅಮೆರಿಕ ವಿರೋಧಿ ಗುಂಪು ಈ ಹೇಳಿಕೆಯನ್ನು ನೀಡಿದೆ.

 ಅಮೆರಿಕ ರಾಯಭಾರ ಕಚೇರಿ ಸಮೀಪದ ಸ್ಥಳವೊಂದಕ್ಕೆ ಶನಿವಾರ ಸಂಜೆ ಮೋರ್ಟರ್‌ಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಅದಾದ ಕ್ಷಣಗಳ ಬಳಿಕ, ಎರಡು ರಾಕೆಟ್‌ಗಳು ಇರಾಕ್‌ನಲ್ಲಿ ಅಮೆರಿಕದ ಸೈನಿಕರಿರುವ ನೆಲೆಯೊಂದರ ಸಮೀಪ ಅಪ್ಪಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News