×
Ad

ಟ್ರಂಪ್ ಸೂಟ್ ಹಾಕಿರುವ ಭಯೋತ್ಪಾದಕ: ಇರಾನ್

Update: 2020-01-05 23:18 IST

ಟೆಹರಾನ್, ಜ. 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಸೂಟ್ ಹಾಕಿರುವ ಭಯೋತ್ಪಾದಕ’ ಎಂದು ಇರಾನ್ ರವಿವಾರ ಬಣ್ಣಿಸಿದೆ.

ಇರಾನ್ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿದರೆ ಅದರ 52 ಸ್ಥಳಗಳ ಮೇಲೆ ಮರು ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆಗೆ ಇರಾನ್ ಈ ರೀತಿಯ ಪ್ರತಿಕ್ರಿಯೆ ನೀಡಿದೆ.

‘‘ಟ್ರಂಪ್ ಐಸಿಸ್‌ನಂತೆ, ಹಿಟ್ಲರ್‌ನಂತೆ, ಗೆಂಘಿಸ್‌ನಂತೆ! ಅವರೆಲ್ಲರೂ ಸಂಸ್ಕೃತಿಯನ್ನು ದ್ವೇಷಿಸುತ್ತಾರೆ. ಟ್ರಂಪ್ ಸೂಟ್‌ನಲ್ಲಿರುವ ಭಯೋತ್ಪಾದಕ. ಶ್ರೇಷ್ಠ ಇರಾನ್ ದೇಶ ಮತ್ತು ಸಂಸ್ಕೃತಿಯನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಸತ್ಯವನ್ನು ಅವರು ಶೀಘ್ರದಲ್ಲೇ ಅರಿಯುತ್ತಾರೆ’’ ಎಂದು ಇರಾನ್‌ನ ವಾರ್ತಾ ಮತ್ತು ಸಂಪರ್ಕ ಸಚಿವ ಮುಹಮ್ಮದ್ ಜವಾದ್ ಅಝರಿ-ಜಹ್ರೂಮಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News