ತೆರಿಗೆ ಪ್ರಕ್ರಿಯೆ ಸರಳೀಕರಣಕ್ಕೆ ಕ್ರಮ: ನಿರ್ಮಲಾ ಸೀತಾರಾಮನ್

Update: 2020-01-07 18:58 GMT

ಹೊಸದಿಲ್ಲಿ, ಜ.7: ತೆರಿಗೆ ಪ್ರಕ್ರಿಯೆಯನ್ನು ಸರಳ ಮತ್ತು ಸುಗಮಗೊಳಿಸಲು ಹಾಗೂ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಆಗುವ ತೊಂದರೆ ನಿವಾರಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್‌ಟಿ ಫೈಲಿಂಗ್ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ಸಲಹೆಗಳನ್ನೂ ಸರಕಾರ ಮುಕ್ತವಾಗಿ ಸ್ವೀಕರಿಸಲಿದೆ ಎಂದರು. ಇದೇ ರೀತಿ, ಹಲವರಿಂದ ಬಂದ ಸಲಹೆಗಳ ಆಧಾರದಲ್ಲಿ ಸರಕಾರ ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಲು ಕ್ರಮಗಳನ್ನು ಕೈಗೊಂಡಿದೆ. ತೆರಿಗೆ ಪಾವತಿದಾರರಿಗೆ ಎದುರಾಗುವ ಅನಾನುಕೂಲತೆಗಳನ್ನು ನಿವಾರಿಸಲು ಮುಖರಹಿತ ಇ-ಅಸೆಸ್‌ಮೆಂಟ್ (ವೌಲ್ಯಮಾಪನ)ಯೋಜನೆಯನ್ನು ಅಕ್ಟೋಬರ್‌ನಲ್ಲಿ ಆರಂಭಿಸಲಾಗಿದೆ. ಅಲ್ಲದೆ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಹೊಣೆಗಾರಿಗೆ ಹಾಗೂ ಪಾರದರ್ಶಕತೆ ಖಾತರಿಗೊಳಿಸಲು ಕಂಪ್ಯೂಟರ್ ನಿರ್ಮಿತ ದಾಖಲೆ ಗುರುತು ಸಂಖ್ಯೆ(ಡಿಐಎನ್)ಯನ್ನು ತೆರಿಗೆ ಇಲಾಖೆ ಜಾರಿಗೊಳಿಸಿದೆ ಎಂದು ಸಚಿವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News