×
Ad

ಅಮೆರಿಕಕ್ಕೆ ಬ್ಲಾಕ್‌ ಬಾಕ್ಸ್ ಹಸ್ತಾಂತರವಿಲ್ಲ: ಇರಾನ್

Update: 2020-01-08 22:36 IST

ಟೆಹರಾನ್,ಜ.8: ಪತನಗೊಂಡ ಬೋಯಿಂಗ್ 737-800 ವಿಮಾನದಲ್ಲಿ ಪತ್ತೆಯಾದ ಬ್ಲಾಕ್‌ಬಾಕ್ಸ್ ಅನ್ನು ಅಮೆರಿಕನ್ನರಿಗೆ ಹಸ್ತಾಂತರಿಸುವುದಿಲ್ಲವೆಂದು ಇರಾನ್‌ನ ವಾಯುಯಾನ ಪ್ರಾಧಿಕಾರವು ತಿಳಿಸಿದೆ.

 ವಿಮಾನದ ಬ್ಲಾಕ್‌ಬಾಕ್ಸ್ ಅನ್ನು ತಯಾರಕ ಸಂಸ್ಥೆ ಬೋಯಿಂಗ್‌ಗೆ ಅಥವಾ ಅಮೆರಿಕನ್ನರಿಗೆ ಪರಿಶೀಲನೆಗಾಗಿ ನೀಡುವುದಿಲ್ಲವೆಂದು ಇರಾನ್‌ನ ನಾಗರಿಕ ವಾಯುಯಾನ ಸಂಸ್ಥೆಯ ವರಿಷ್ಠ ಅಲಿ ಅಬ್ದೆದ್‌ಝಾದೆಹ್ ತಿಳಿಸಿದ್ದಾರೆಂದು ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ.

‘‘ತನಿಖೆಗಾಗಿ ಬ್ಲಾಕ್‌ಬಾಕ್ಸ್ ಅನ್ನು ಕಳುಹಿಸಲಾಗುವುದೆಂಬ ಈ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲ’’ ಎಂದು ಅಬ್ದೆದ್ ಝಾದೆಹ್ ತಿಳಿಸಿದ್ದಾರೆಂದು ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಮಾನಪತನಗೊಂಡ ಕೆಲವೇ ನಿಮಿಷಗಳ ಬಳಿಕ ಇರಾನ್ ಹೇಳಿಕೆಯೊಂದನ್ನು ನೀಡಿ, ಬೋಯಿಂಗ್ 737ರ ಬ್ಲಾಕ್‌ಬಾಕ್ಸ್‌ಗಳನ್ನು ಅಪಘಾತದ ಸ್ಥಳದಿಂದ ತಾನು ಪತ್ತೆಹಚ್ಚಿರುವುದಾಗಿ ಇರಾನ್ ತಿಳಿಸಿತ್ತು. ಜಾಗತಿಕ ವಾಯುಯಾನ ನಿಯಮಾವಳಿಗಳ ಪ್ರಕಾರ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುವುದನ್ನು ನಿರ್ಧರಿಸುವ ಅಧಿಕಾರವು ಅವಘಡ ಸಂಭವಿಸಿದ ದೇಶದ್ದಾಗಿದೆ ಎಂದು ಅಬ್ದೆದ್‌ಝಾದೆಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News