×
Ad

ಅಮೆರಿಕಕ್ಕೆ ಕಪಾಳಮೋಕ್ಷ: ಖಾಮಿನೈ

Update: 2020-01-08 22:43 IST

ಟೆಹರಾನ್,ಜ.2: ಇರಾಕ್‌ನಲ್ಲಿ ಅಮೆರಿಕನ್ ಸೇನಾಪಡೆಗಳ ನೆಲೆಗಳ ಮೇಲೆ ತಾನು ನಡೆಸಿದ ಕ್ಷಿಪಣಿ ದಾಳಿಯು ಅಮೆರಿಕದ ಮುಖಕ್ಕೊಂದು ಹೊಡೆತವೆಂದು ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಹೇಳಿದ್ದಾರೆ. ಕ್ಷಿಪಣಿ ದಾಳಿಯ ಬಳಿಕ ಇರಾನ್‌ನ ರಾಷ್ಟ್ರೀಯ ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ರಾತ್ರಿ, (ಅಮೆರಿಕದ) ಮುಖಕ್ಕೆ ಹೊಡೆಯಲಾಗಿದೆ’’ ಎಂದರು.

 ಕಳೆದ ವಾರ ಬಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅಮೆರಿಕ ಸೇನೆಯು ಡ್ರೋನ್ ದಾಳಿ ನಡೆಸಿ ಇರಾನಿ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರ ಹತ್ಯೆಗೆ, ಘೋರವಾದ ಪ್ರತೀಕಾರ ತೀರಿಸುವುದಾಗಿ ಅವರು ಶಪಥ ಮಾಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಭ್ರಷ್ಟ ಉಪಸ್ಥಿತಿಯು ಕೊನೆಗೊಳ್ಳಬೇಕಾದುದು ಮುಖ್ಯವಾಗಿದೆಯೆಂದು ಖಾಮಿನೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News