ಜೆಎನ್‌ಯು ಹಿಂಸಾಚಾರ: 11 ದೂರು ಸಲ್ಲಿಕೆ
Update: 2020-01-08 23:22 IST
ಹೊಸದಿಲ್ಲಿ, ಜ.8: ಜೆಎನ್‌ಯುವಿನಲ್ಲಿ ರವಿವಾರ ನಡೆದ ದಾಳಿ ಮತ್ತು ಹಿಂಸಾಚಾರ ಘಟನೆಗೆ ಸಂಬಂಧಿಸಿ 11 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದರಲ್ಲಿ ಒಂದು ದೂರನ್ನು ವಿವಿಯ ಪ್ರೊಫೆಸರ್ ಸಲ್ಲಿಸಿದ್ದರೆ ಉಳಿದ ದೂರು ವಿದ್ಯಾರ್ಥಿಗಳಿಂದ ಸಲ್ಲಿಕೆಯಾಗಿದೆ. 11 ದೂರುಗಳನ್ನೂ ಕ್ರೈಂಬ್ರಾಂಚ್‌ಗೆ ವರ್ಗಾಯಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ ವಿಭಾಗ) ದೇವೇಂದರ್ ಆರ್ಯ ಹೇಳಿದ್ದಾರೆ. ಈ ಮಧ್ಯೆ, ಜೆಎನ್‌ಯು ಕ್ಯಾಂಪಸ್‌ಗೆ ಭೇಟಿ ನೀಡಿರುವ ಕ್ರೈಂಬ್ರಾಂಚ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪುರಾವೆಗಳನ್ನು ಸಂಗ್ರಹಿಸಿದ್ದು ವೀಡಿಯೊ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ವೀಡಿಯೊ ದೃಶ್ಯಾವಳಿಗಳಿದ್ದರೆ ಒದಗಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಜೆಎನ್‌ಯು ಆವರಣದಲ್ಲಿ ಬಿಗು ಪೊಲೀಸ್ ಭದ್ರತೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.