ಅಮೆರಿಕದ ದಕ್ಷಿಣ ಭಾಗದಲ್ಲಿ ಬಿರುಗಾಳಿ; 11 ಸಾವು
ವಾಶಿಂಗ್ಟನ್, ಜ. 12: ಅಮೆರಿಕದ ದಕ್ಷಿಣ ಭಾಗಕ್ಕೆ ತೀವ್ರ ಬಿರುಗಾಳಿ ಅಪ್ಪಳಿಸಿದ್ದು ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಣಿ ಬಿರುಗಾಳಿಯು ಕಾರುಗಳನ್ನು ತಲೆಕೆಳಗೆ ಮಾಡಿದೆ, ಮನೆಗಳನ್ನು ನಾಶಗೊಳಿಸಿದೆ ಹಾಗೂ ಸಾವಿರಾರು ಮನೆಗಳ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದೆ.
ಅಮೆರಿಕದ ದಕ್ಷಿಣದ ಭಾಗಗಳಿಗೆ ಅಪ್ಪಳಿಸಿರುವ ಬಿರುಗಾಳಿಯು ರವಿವಾರ ಪೂರ್ವ ಮತ್ತು ಉತ್ತರಾಭಿಮುಖವಾಗಿ ಚಲಿಸುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಬಿರುಗಾಳಿಯ ಪರಿಣಾಮವಾಗಿ ಪ್ರವಾಹ ತಲೆದೋರಬಹುದು ಎಂಬ ಎಚ್ಚರಿಕೆಯನ್ನೂ ಅದು ಹಲವಾರು ರಾಜ್ಯಗಳಿಗೆ ನೀಡಿದೆ.
ಮೃತರಲ್ಲಿ ಓರ್ವ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ. ಟೆಕ್ಸಾಸ್‌ನಲ್ಲಿ ಶೀತಲ ವಾತಾವರಣದಲ್ಲಿ ಸಂಭವಿಸಿರುವ ಅಪಘಾತಗಳನ್ನು ನಿಭಾಯಿಸಲು ಅವರು ಸ್ಥಳಕ್ಕೆ ಹೋಗುತ್ತಿರುವಾಗ ಅವರು ಪ್ರಯಾಣಿಸುತ್ತಿದ್ದ ವಾಹನವೇ ಅಪಘಾತಕ್ಕೀಡಾಗಿದೆ.
ಯುಕ್ರೇನ್ ಏರ್‌ಲೈನ್ಸ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಟೆಹರಾನ್‌ನ ಅಮೀರ್ ಕಬೀರ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಶನಿವಾರ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತಪಟ್ಟವರಲ್ಲಿ ಕೆಲವರು ಈ ವಿಶ್ವವಿದ್ಯಾನಿಲಯದ ಹಳೆವಿದ್ಯಾರ್ಥಿಗಳಾಗಿದ್ದಾರೆ.