ತಾಯಿ ಬೌಲರ್, ಮಗ ಬ್ಯಾಟ್ಸ್‌ಮನ್: ಕೈಫ್ ವಿಡಿಯೋ ವೈರಲ್

Update: 2020-01-14 08:03 GMT
ಚಿತ್ರ : ಟ್ವಿಟರ್.

ಹೊಸದಿಲ್ಲಿ, ಜ.14: ಕ್ರಿಕೆಟ್ ಒಂದು ಕ್ರೀಡೆ ಮಾತ್ರವಲ್ಲ, ಅದೊಂದು ಧರ್ಮ ಎಂದು ಭಾರತದಲ್ಲಿ ಹೇಳಲಾಗುತ್ತದೆ. ಎಲ್ಲರೂ ಕ್ರಿಕೆಟಿಗನಾಗಬೇಕೆಂದು ಬಯಸುತ್ತಾರೆ. ಬಾಲ್ಯದಲ್ಲಿ ಕ್ರಿಕೆಟ್‌ನತ್ತ ಆಕರ್ಷಿತವಾಗುವ ಮಕ್ಕಳು ಒಂದಲ್ಲ ಒಂದು ದಿನ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಾಗುವ ಕನಸು ಕಾಣುವುದು ಸಹಜ. ಕ್ರಿಕೆಟ್ ಪಂದ್ಯವು ಧರ್ಮ, ಅಂತಸ್ತು ಅಥವಾ ಲಿಂಗವನ್ನು ಮೀರಿ ನಿಂತಿದೆ. ಇದನ್ನು ಎಲ್ಲರೂ ಇಷ್ಟಪಡುತ್ತಾರೆ.

ಭಾರತದ ಮಾಜಿ ಆಟಗಾರ ಮುಹಮ್ಮದ್ ಕೈಫ್ ಸೋಮವಾರ ಟ್ವೀಟ್ ಮಾಡಿರುವ ವಿಡಿಯೊ, ಭಾರತದಲ್ಲಿ ಕ್ರಿಕೆಟ್ ಎಷ್ಟೊಂದು ಜನಪ್ರಿಯ ಕ್ರೀಡೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. 27 ಸೆಕೆಂಡ್‌ಗಳ ವಿಡಿಯೊದಲ್ಲಿ ಪೋರನೊಬ್ಬ ಬ್ಯಾಟಿಂಗ್ ಮಾಡುತ್ತಿದ್ದರೆ, ಆ ಪೋರನ ತಾಯಿ ಬೌಲಿಂಗ್ ಮಾಡುತ್ತಿದ್ದಾರೆ. ಎರಡರಿಂದ ಮೂರು ವರ್ಷದ ಬಾಲಕ ಜನನಿಬಿಡ ರಸ್ತೆಯಲ್ಲಿ ಪ್ಲಾಸ್ಟಿಕ್ ಚೆಂಡನ್ನು ಜೋರಾಗಿ ಹೊಡೆಯುವ ದ್ಯಶ್ಯ ಎಲ್ಲ ಗಮನ ಸೆಳೆಯುತ್ತಿದೆ.

‘‘ತಾಯಿಯ ಬೌಲಿಂಗ್, ಮಗನ ಬ್ಯಾಟಿಂಗ್. ಇದನ್ನು ವರ್ಣಿಸಲು ಇರುವ ಒಂದೇ ಪದ: ‘ಬ್ಯೂಟಿಫುಲ್’: ಎಂದು ಹಲವು ಅಭಿಮಾನಿಗಳ ಮನ ಗೆದ್ದಿರುವ ವಿಡಿಯೊದೊಂದಿಗೆ ಕೈಫ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News