ಪಂಜಾಬ್: ಗಡಿಭಾಗದಲ್ಲಿ ಡ್ರೋನ್ ಹಾರಾಟ ಪತ್ತೆ

Update: 2020-01-14 17:21 GMT
Photo: PTI

ಅಮೃತಸರ, ಜ.14: ಪಂಜಾಬ್‌ನ ಫಿರೋಝ್‌ಪುರದ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಡ್ರೋನ್‌ನಂತಹ ವಸ್ತುವೊಂದು ಹಾರಾಡುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಯೋಧರು ಅದರತ್ತ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ಶಮೇಕ್ ಗಡಿ ಹೊರಠಾಣಾ ವ್ಯಾಪ್ತಿಯ ಟೆಂಡಿವಾಲ ಗ್ರಾಮದಲ್ಲಿ ಡ್ರೋನ್‌ನಂತಹ ವಸ್ತು ಹಾರಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಬಿಎಸ್‌ಎಫ್ ಯೋಧರು ಅದರತ್ತ ಗುಂಡು ಹಾರಿಸಿದರು. ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದರೂ ಡ್ರೋಣ್‌ನ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನುಮಾನಾಸ್ಪದ ವಸ್ತು ಪತ್ತೆಯಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಬಲ್ಜೀತ್ ಸಿಂಗ್ ಸಿಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News