ಶಿವಾಜಿ ಸ್ಮಾರಕ ಭೂಪ್ರದೇಶದಲ್ಲಿರಬೇಕು: ಎಂಎಸ್‌ಎಸ್ ಆಗ್ರಹ
ಮುಂಬೈ,ಜ.15: ಹದಿನೇಳನೇ ಶತಮಾನದ ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಯೋಜಿತ ಸ್ಮಾರಕವನ್ನು ಸಮದ್ರದ ಬದಲು ಭೂಪ್ರದೇಶದಲ್ಲಿ ನಿರ್ಮಿಸಬೇಕು ಎಂದು ಮರಾಠಾ ಸೇವಾ ಸಂಘ (ಎಂಎಸ್‌ಎಸ್)ವು ಆಗ್ರಹಿಸಿದೆ. ಮಹಾರಾಷ್ಟ್ರ ಸರಕಾರವು ಸದ್ರಿ ಸ್ಮಾರಕವನ್ನು ಮುಂಬೈ ತೀರದಾಚೆ ಸಮದ್ರದಲ್ಲಿ ನಿರ್ಮಿಸುತ್ತಿದೆ.
ಸ್ಮಾರಕವನ್ನು ಸಮುದ್ರದಲ್ಲಿ ನಿರ್ಮಿಸುವುದರಿಂದ ನಿರ್ಮಾಣ ಮತ್ತು ನಿರ್ವಹಣೆ ವೆಚ್ಚಗಳು ಹೆಚ್ಚುತ್ತವೆ. ಅಮೆರಿಕದ ಸ್ವಾತಂತ್ರ ಪ್ರತಿಮೆಯೂ ಸಮುದ್ರದಲ್ಲಿದೆ ಮತ್ತು ನಿರ್ವಹಣೆಗಾಗಿ ಅದನ್ನು 3-4 ತಿಂಗಳು ಮುಚ್ಚಬೇಕಾಗುತ್ತದೆ. ಸ್ಮಾರಕವನ್ನು ನೆಲದ ಮೇಲೆ ನಿರ್ಮಿಸಿದರೆ ಯೋಜನೆಯ ವೆಚ್ಚದಲ್ಲಿ ಅರ್ಧದಷ್ಟು ಕಡಿಮೆಯಾಗುತ್ತದೆ. ತಾನು ಶೀಘ್ರವೇ ಮುಖ್ಯಮಂತ್ರಿ ಉದ್ಧವ ಠಾಕೂರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಬೇಡಿಕೆಯನ್ನು ಸಲ್ಲಿಸುತ್ತೇನೆ ಎಂದು ಎಂಎಸ್‌ಎಸ್ ಮುಖ್ಯಸ್ಥ ಪುರುಷೋತ್ತಮ ಖೇಡೆಕರ್ ತಿಳಿಸಿದರು.
ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಅಂದಾಜು 3000 ಕೋ.ರೂ.ಗೂ ಅಧಿಕ ಮೊತ್ತ ವೆಚ್ಚವಾಗಲಿದೆ.