ಯುಪಿಎಸ್ಸಿ ಪರೀಕ್ಷೆಯಲ್ಲಿ 18 ಜೆಎನ್‌ಯು ವಿದ್ಯಾರ್ಥಿಗಳು ತೇರ್ಗಡೆ

Update: 2020-01-15 18:05 GMT

ಹೊಸದಿಲ್ಲಿ, ಜ.15: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಐಇಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ 32 ವಿದ್ಯಾರ್ಥಿಗಳಲ್ಲಿ ಜೆಎನ್‌ಯು ವಿವಿಯ 18 ವಿದ್ಯಾರ್ಥಿಗಳು ಸೇರಿದ್ದು ಈ ಸಾಧನೆಗಾಗಿ ವಿವಿಯನ್ನು ಕೇಂದ್ರ ಸರಕಾರ ಅಭಿನಂದಿಸಿದೆ. ಜೆಎನ್‌ಯು ದೇಶದ ಅಗ್ರಗಣ್ಯ ವಿಶ್ವವಿದ್ಯಾನಿಲಯವಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಪೋಖ್ರಿಯಾಲ್ ಅಭಿನಂದಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪ್ರತಿಷ್ಠಿತ ಭಾರತೀಯ ಆರ್ಥಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಒಟ್ಟು 32 ವಿದ್ಯಾರ್ಥಿಗಳಲ್ಲಿ 18 ಜೆಎನ್‌ಯು ವಿದ್ಯಾರ್ಥಿಗಳಾಗಿದ್ದಾರೆ. ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಜೆಎನ್‌ಯು ದೇಶದ ಅಗ್ರಗಣ್ಯ ವಿವಿಯಾಗಿದೆ ಎಂಬುದು ಹೆಮ್ಮೆಯ ವಿಷಯ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ ಐಇಎಸ್ ಪರೀಕ್ಷೆಯ ಫಲಿತಾಂಶ ಜನವರಿ 10ರಂದು ಪ್ರಕಟವಾಗಿದೆ. ಐಇಎಸ್ ವಿಭಾಗದ 6 ವಿದ್ಯಾರ್ಥಿಗಳು ಮತ್ತು ಐಎಸ್‌ಎಸ್ ವಿಭಾಗದ 11 ವಿದ್ಯಾರ್ಥಿಗಳ ಫಲಿತಾಂಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಇವರ ಮೂಲದಾಖಲೆ ಪರಿಶೀಲಿಸಿದ ಬಳಿಕ ಫಲಿತಾಂಶ ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News