ವ್ಯಾಟಿಕನ್: ಉನ್ನತ ಹುದ್ದೆಗೆ ಪ್ರಥಮ ಮಹಿಳೆ ನೇಮಿಸಿದ ಪೋಪ್

Update: 2020-01-16 17:10 GMT

ವ್ಯಾಟಿಕನ್ ಸಿಟಿ, ಜ. 16: ವ್ಯಾಟಿಕನ್‌ನ ಪುರುಷ ಪ್ರಾಬಲ್ಯದ ರಾಜತಾಂತ್ರಿಕ ಮತ್ತು ಆಡಳಿತ ಕೇಂದ್ರವಾಗಿರುವ ಸರಕಾರಿ ಕಾರ್ಯಾಲಯದ ಉನ್ನತ ಹುದ್ದೆಯೊಂದಕ್ಕೆ ಪೋಪ್ ಫ್ರಾನ್ಸಿಸ್ ಬುಧವಾರ ಪ್ರಥಮ ಮಹಿಳೆಯನ್ನು ನೇಮಿಸಿದ್ದಾರೆ.

ವಿದೇಶಗಳ ಸರಕಾರಗಳೊಂದಿಗಿನ ಸಂಬಂಧವನ್ನು ಕಾಯ್ದುಕೊಳ್ಳುವ ಸರಕಾರಿ ಕಾರ್ಯಾಲಯದ ಇಲಾಖೆಯಲ್ಲಿ ಹೊಸದಾಗಿ ಸೃಷ್ಟಿಸಲಾಗಿರುವ ಹುದ್ದೆಗೆ ಇಟಲಿಯ ಸಾಮಾನ್ಯ ಮಹಿಳೆ 66 ವರ್ಷದ ಫ್ರಾನ್ಸೆಸ್ಕ ಡಿ ಜಿಯೊವನಿಯನ್ನು ನೇಮಿಸಲಾಗಿದೆ. ಅವರು ಅಧೀನ ಕಾರ್ಯದರ್ಶಿಯ ದರ್ಜೆಯನ್ನು ಹೊಂದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News