2020ರಲ್ಲೂ ತೀವ್ರ ಹವಾಮಾನ ವೈಪರೀತ್ಯಗಳ ಮುಂದುವರಿಕೆ: ವಿಶ್ವಸಂಸ್ಥೆ ಹವಾಮಾನ ಸಂಘಟನೆ

Update: 2020-01-16 17:15 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 16: ಕಳೆದ ದಶಕವು ದಾಖಲೆಯಲ್ಲಿರುವ ಇತಿಹಾಸದಲ್ಲೇ ಅತ್ಯಂತ ಬಿಸಿ ಅವಧಿಯಾಗಿತ್ತು ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ. ಆದರೆ, 2020 ಮತ್ತು ಅದರ ಬಳಿಕವೂ ಹೆಚ್ಚುತ್ತಿರುವ ತಾಪಮಾನವು ತೀವ್ರ ರೀತಿಯ ಹವಾಮಾನಕ್ಕೆ ಸಂಬಂಧಿಸಿದ ಘಟನೆಗಳನ್ನು ಸೃಷ್ಟಿಸಲಿದೆ ಎಂದು ವಿಶ್ವ ಹವಾಮಾನ ಸಂಘಟನೆ ತಿಳಿಸಿದೆ.

ಜಾಗತಿಕ ತಾಪಮಾನದಲ್ಲಿನ ಏರಿಕೆಯು ಈಗಾಗಲೇ ದುಷ್ಪರಿಣಾಮಗಳನ್ನು ಪ್ರದರ್ಶಿಸಿವೆ ಎಂದು ಹೇಳಿರುವ ಸಂಘಟನೆಯು, ‘‘ಕರಗುತ್ತಿರುವ ಹಿಮ, ದಾಖಲೆಯ ಸಮುದ್ರ ಮಟ್ಟಗಳು, ಹೆಚ್ಚುತ್ತಿರುವ ಸಾಗರ ಉಷ್ಣತೆ ಮತ್ತು ಆಮ್ಲೀಯತೆ ಹಾಗೂ ವಿಕ್ಷಿಪ್ತ ಹವಾಮಾನವು’’ ತಾಪಮಾನದಲ್ಲಿನ ಏರಿಕೆಯ ಪರಿಣಾಮವಾಗಿವೆ ಎಂದಿದೆ.

‘‘2019 ಎಲ್ಲಿ ಕೊನೆಗೊಂಡಿದೆಯೋ ಅಲ್ಲಿಂದ 2020 ಆರಂಭಗೊಂಡಿದೆ. ಹವಾಮಾನ ಮತ್ತು ಪರಿಸರ ಸಂಬಂಧಿ ವಿಪತ್ತುಗಳು ಮುಂದುವರಿದಿವೆ’’ ಎಂದು ವಿಶ್ವ ಹವಾಮಾನ ಸಂಘಟನೆಯ ಮುಖ್ಯಸ್ಥ ಪೆಟರಿ ಟಾಲಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಹಲವು ತಿಂಗಳುಗಳಿಂದ ಆಸ್ಟ್ರೇಲಿಯವನ್ನು ಕಾಡುತ್ತಿರುವ ಕಾಡ್ಗಿಚ್ಚುಗಳತ್ತ ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News