×
Ad

ನಾಪತ್ತೆಯಾಗಿದ್ದ ಭಾರತೀಯ-ಅಮೆರಿಕನ್ ಮಹಿಳೆಯ ಶವ ಕಾರಿನಲ್ಲಿ ಪತ್ತೆ

Update: 2020-01-17 22:48 IST

ವಾಶಿಂಗ್ಟನ್, ಜ. 17: ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ-ಅಮೆರಿಕನ್ ಮಹಿಳೆಯೊಬ್ಬರ ಮೃತದೇಹವು ಅವರದೇ ಕಾರಿನ ಟ್ರಂಕ್‌ನಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಶಿಕಾಗೊದ ಲೊಯೋಲಾ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿರುವ 34 ವರ್ಷದ ಸುರೀಲ್ ಡಾಬಾವಾಲಾ ನಾಪತ್ತೆಯಾಗಿದ್ದಾರೆ ಎಂಬುದಾಗಿ ಕಳೆದ ವರ್ಷದ ಡಿಸೆಂಬರ್ 30ರಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.

 ಹಲವು ದಿನಗಳ ತೀವ್ರ ಶೋಧದ ಬಳಿಕ, ಮಹಿಳೆಯ ಕುಟುಂಬ ಸದಸ್ಯರು ನೇಮಿಸಿರುವ ಖಾಸಗಿ ಪತ್ತೇದಾರರು ಶಿಕಾಗೊದ ವೆಸ್ಟ್ ಗ್ಯಾರ್‌ಫೀಲ್ಡ್ ಪಾರ್ಕ್‌ನ ಉಪನಗರದಲ್ಲಿ ಸೋಮವಾರ ಮಹಿಳೆಯ ಶವವನ್ನು ಅವರದೇ ಕಾರಿನ ಟ್ರಂಕ್‌ನಲ್ಲಿ ಪತ್ತೆಹಚ್ಚಿದರು ಎಂದು ‘ಅಮೆರಿಕನ್ ಬಝಾರ್’ ಪತ್ರಿಕೆ ಗುರುವಾರ ವರದಿ ಮಾಡಿದೆ.

ಸುರೀಲ್ ತಂದೆ ಅಶ್ರಫ್ ಡಾಬಾವಾಲಾ ಶಿಕಾಗೊದ ಶಾಂಬರ್ಗ್‌ನಲ್ಲಿ ಖ್ಯಾತ ವೈದ್ಯರಾಗಿದ್ದಾರೆ. ಅವರು ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಹೋದವರು.

ನಾಪತ್ತೆಯಾಗಿರುವ ಸುರೀಲ್ ಬಗ್ಗೆ ಮಾಹಿತಿ ನೀಡುವವರಿಗೆ 10,000 ಡಾಲರ್ ಬಹುಮಾನ ನೀಡುವುದಾಗಿ ಅವರ ಕುಟುಂಬ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News