ಜಮ್ಮು ಕಾಶ್ಮೀರ: ಗೃಹ ಬಂಧನದಲ್ಲಿದ್ದ ನಾಲ್ವರು ರಾಜಕಾರಣಿಗಳ ಬಿಡುಗಡೆ

Update: 2020-01-17 18:09 GMT

ಶ್ರೀನಗರ, ಜ. 17: ಗೃಹ ಬಂಧನದಲ್ಲಿದ್ದ ನಾಲ್ವರು ರಾಜಕಾರಣಿಗಳನ್ನು ಜಮ್ಮು ಹಾಗೂ ಕಾಶ್ಮೀರ ಆಡಳಿತ ಗುರುವಾರ ಬಿಡುಗಡೆ ಮಾಡಿದೆ. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದುಗೊಳಿಸಿದ ಬಳಿಕ ವಿಧಿಸಲಾದ ನಿರ್ಬಂಧದ ಹಿನ್ನೆಲೆಯಲ್ಲಿ 5 ತಿಂಗಳು ಗೃಹ ಬಂಧನದಲ್ಲಿ ಇದ್ದ ಎನ್‌ಸಿ, ಪಿಡಿಪಿ, ಪಿಸಿ ಹಾಗೂ ಕಾಂಗ್ರೆಸ್‌ನ ತಲಾ ಒಬ್ಬರು ನಾಯಕರನ್ನು ಬಿಡುಗಡೆ ಮಾಡಲಾಗಿದೆ.

ಮಾಜಿ ಸಚಿವ ಹಾಗೂ ಈ ಹಿಂದಿನ ರಾಜ್ಯದ ವಿಧಾನ ಸಭೆಯ ಕೊನೆಯ ಮಾಜಿ ಉಪ ಸ್ವೀಕರ್ ಸಹಿತ ನಾಲ್ವರು ರಾಜಕೀಯ ನಾಯಕರನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಲಾಗಿದೆ.

ಪಿಡಿಪಿಯ ಮಾಜಿ ಸಚಿವ ಅಬ್ದುಲ್ ಹಕ್ ಖಾನ್, ಮಾಜಿ ಉಪ ಸ್ಪೀಕರ್ ನಾಝಿರ್ ಅಹ್ಮದ್ ಗುರೇಝಿ, ಪಿಸಿಯ ಮಾಜಿ ಶಾಸಕ ಮುಹಮ್ಮದ್ ಅಬ್ಬಾಸ್ ವಾನಿ, ಕಾಂಗ್ರೆಸ್‌ನ ಮಾಜಿ ಶಾಸಕ ಅಬ್ದುಲ್ ರಶೀದ್ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News