ಆರೆಸ್ಸೆಸ್‌ಗೂ ರಾಜಕೀಯಕ್ಕೂ ಸಂಬಂಧವಿಲ್ಲ: ಭಾಗವತ್

Update: 2020-01-18 14:45 GMT

ಮೊರಾದಾಬಾದ್(ಉ.ಪ್ರ),ಜ.18: ಆರೆಸ್ಸೆಸ್‌ಗೆ ರಾಜಕೀಯದೊಂದಿಗೆ ಸಂಬಂಧವಿಲ್ಲ ಮತ್ತು ಅದು ಕೇವಲ ದೇಶದ ನೈತಿಕ,ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಕೆಲಸ ಮಾಡುತ್ತಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶನಿವಾರ ಇಲ್ಲಿ ತಿಳಿಸಿದರು.

ನಾಲ್ಕು ದಿನಗಳ ಆರೆಸ್ಸೆಸ್ ಕಾರ್ಯಕರ್ತರ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಜೀವನದ ಎಲ್ಲ ರಂಗಗಳಲ್ಲಿಯ ಜನರು ಆರೆಸ್ಸೆಸ್‌ನ ಭಾಗವಾಗಿದ್ದಾರೆ, ಅವರಲ್ಲಿ ಕೆಲವರು ರಾಜಕೀಯ ಪಕ್ಷಗಳನ್ನೂ ನಡೆಸುತ್ತಿದ್ದಾರೆ. ಚುನಾವಣೆಗಳು ನಮಗೆ ಏನೂ ಅಲ್ಲ. ಕಳೆದ 60 ವರ್ಷಗಳಿಂದಲೂ ದೇಶದ ಮೌಲ್ಯವನ್ನು ಎತ್ತಿ ಹಿಡಿಯಲು ನಾವು ಶ್ರಮಿಸುತ್ತಿದ್ದೇವೆ ’ಎಂದರು.

ಆರೆಸ್ಸೆಸ್ ‘ರಿಮೋಟ್ ಕಂಟ್ರೋಲ್’ ಮೂಲಕ ಬಿಜೆಪಿಯ ಮೇಲೆ ಹಿಡಿತ ಹೊಂದಿದೆ ಎನ್ನುವುದನ್ನು ನಿರಾಕರಿಸಿದ ಅವರು,ಸಂಘಟನೆಯು ಎಲ್ಲ 130 ಕೋಟಿ ಭಾರತೀಯರಿಗಾಗಿ ಶ್ರಮಿಸುತ್ತಿದೆ ಎಂದರು.

‘ ಯಾವುದೇ ವ್ಯಕ್ತಿಯನ್ನು,ಅವರು ಆರೆಸ್ಸೆಸ್‌ನ ಶಾಖೆಗಳಿಗೆ ಬರದಿದ್ದರೂ ಆರೆಸ್ಸೆಸ್ ಕಾರ್ಯಕರ್ತನೆಂದು ಹೇಳಬಹುದು,ಆದರೆ ಅವರು ರಾಷ್ಟ್ರೀಯ ಸಮಗ್ರತೆಯ ಸಿದ್ಧಾಂತವನ್ನು ಹೊಂದಿರಬೇಕು. ನಮ್ಮೊಂದಿಗೆ ಗುರುತಿಸಿಕೊಂಡಿರದ,ಆದರೆ ನಮ್ಮದೇ ಸಿದ್ಧಾಂತವನ್ನು ಹೊಂದಿರುವ ಹಲವಾರು ಶ್ರೇಷ್ಠ ಬುದ್ಧಿಜೀವಿಗಳು ಮತ್ತು ಸಾಮಾಜಿಕ ಸುಧಾರಕರಿದ್ದಾರೆ. ಇದು ನಮ್ಮ ಯಶಸ್ಸು ’ಎಂದು ಭಾಗವತ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News