ಮನೆಯ ಪ್ಲಂಬಿಂಗ್ ವ್ಯವಸ್ಥೆಯನ್ನು ಹಾಳು ಮಾಡುವ ಈ ವಿಷಯಗಳು ನಿಮಗೆ ಗೊತ್ತಿರಲಿ

Update: 2020-01-19 15:53 GMT
ಫೋಟೊ ಕೃಪೆ: homefixer.co.za

ಹೆಚ್ಚಿನವರಿಗೆ ಗೊತ್ತಿಲ್ಲದಿರಬಹುದು,ಆದರೆ ನಮ್ಮ ಮನೆಗಳಲ್ಲಿನ ಪ್ಲಂಬಿಂಗ್ ವ್ಯವಸ್ಥೆಗೆ ದೊಡ್ಡ ಶತ್ರುಗಳು ನಾವೇ ಆಗಿರುತ್ತೇವೆ ಮತ್ತು ನಮ್ಮ ಕೆಟ್ಟ ಅಭ್ಯಾಸಗಳು ಡ್ರೆನೇಜ್‌ಗಳು ಮತ್ತು ಪೈಪುಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಎಲ್ಲಕ್ಕೂ ಮಿಗಿಲಾಗಿ ಪ್ಲಂಬಿಂಗ್ ವ್ಯವಸ್ಥೆಗೆ ಆಗಿರುವ ಹಾನಿಯನ್ನು ಸರಿಪಡಿಸಲು ಉಪಕರಣಗಳನ್ನು ಹಿಡಿದುಕೊಂಡು ಸ್ವಯಂ ಮುಂದಾಗುವುದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಖರ್ಚನ್ನು ಇನ್ನಷ್ಟು ಹೆಚ್ಚಿಸುತ್ತದೆ. ಪ್ಲಂಬಿಂಗ್ ವ್ಯವಸ್ಥೆ ಕೈಕೊಡುವುದನ್ನು ತಪ್ಪಿಸಲು ವಹಿಸಬೇಕಾದ ಕಾಳಜಿಯ ಕುರಿತು ಮಾಹಿತಿಯಿಲ್ಲಿದೆ.

►ಲಿಕ್ವಿಡ್ ಡ್ರೇನ್ ಕ್ಲೀನರ್‌ಗಳ ಬಳಕೆ ನಿಲ್ಲಿಸಿ

ಮನೆಯಲ್ಲಿನ ಸಿಂಕ್ ಅಥವಾ ತ್ಯಾಜ್ಯ ಹೊರಹೋಗುವ ಕೊಳವೆಗಳು ಕಟ್ಟಿಕೊಂಡಾಗ ಸುಲಭದ ಪರಿಹಾರವಾಗಿ ದ್ರವರೂಪದ ಡ್ರೇನ್ ಕ್ಲೀನರ್‌ಗಳ ಬಳಕೆಯನ್ನು ನಿವಾರಿಸಿ. ಈ ಕ್ಲೀನರ್‌ಗಳು ಸಮಸ್ಯೆಯನ್ನು ಬಗೆಹರಿಸಲು ಕೆಲಮಟ್ಟಿಗೆ ನೆರವಾಗುತ್ತವೆ ನಿಜ,ಆದರೆ ಅದರಲ್ಲಿರುವ ಒರಟು ರಾಸಾಯನಿಕಗಳು ಉಷ್ಣವನ್ನು ಉತ್ಪತ್ತಿ ಮಾಡುತ್ತವೆ ಮತ್ತು ಕೊಳವೆಗಳಲ್ಲಿ ಬಿರುಕುಗಳನ್ನುಂಟು ಮಾಡಬಹುದು ಅಥವಾ ಈಗಾಗಲೇ ಇರುವ ತುಕ್ಕಿನೊಂದಿಗೆ ಪ್ರತಿವರ್ತಿಸಿ ಅಪಾಯಕಾರಿ ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗಬ ಹುದು.

►ತ್ಯಾಜ್ಯಗಳನ್ನು ಪ್ಲಷ್ ಮಾಡುವುದು

ಮನೆಯ ಟಾಯ್ಲೆಟ್‌ನ್ನು ತ್ಯಾಜ್ಯಗುಂಡಿಯಂತೆ ಭಾವಿಸುವುದು ಅದು ಕಟ್ಟಿಕೊಳ್ಳಲು ಕಾರಣವಾಗುತ್ತದೆ ಮತ್ತು ರಿಪೇರಿ ಮಾಡಲು ಪ್ಲಂಬರ್‌ಗೆ ದುಬಾರಿ ಶುಲ್ಕ ನೀಡುವಂತಾ ಗುತ್ತದೆ. ಬಳಸಿದ ಸ್ಯಾನಿಟರಿ ಪ್ಯಾಡ್‌ಗಳು,ಪೇಪರ್ ಟವೆಲ್‌ಗಳು,ಬೇಬಿ ವೈಪ್‌ಗಳು ಹೀಗೆ ಟಾಯ್ಲೆಟ್ ಪೇಪರ್ ಅಲ್ಲದ ಯಾವುದೇ ವಸ್ತುವನ್ನು ಟಾಯ್ಲೆಟ್‌ನಲ್ಲಿ ಹಾಕಿ ಫ್ಲಷ್ ಮಾಡುವ ಅಭ್ಯಾಸವನ್ನು ಮೊದಲು ಕೈಬಿಡಿ.

►ನೆನಪಿಡಿ,ನೀವು ಪ್ಲಂಬರ್ ಅಲ್ಲ

ಇಂದಿನ ದಿನಗಳಲ್ಲಿ ಇಲೆಕ್ಟ್ರಿಷಿಯನ್‌ಗಳು,ಪ್ಲಂಬರ್‌ಗಳ ಕೆಲಸ ದುಬಾರಿಯಾಗಿದೆ. ಆದರೆ ಹಾಗೆಂದು ನೀವೇ ಉಪಕರಣಗಳನ್ನು ಹಿಡಿದುಕೊಂಡು ರಿಪೇರಿಗೆ ಮುಂದಾಗಬಾ ರದು. ಅನುಭವವಿಲ್ಲದ ನೀವು ಒಂದು ಮಾಡಲು ಹೋಗಿ ಇನ್ನೊಂದಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರಿಪೇರಿಗೆ ಮುನ್ನ ನಾಲ್ಕೈದು ಪ್ಲಂಬರ್‌ಗಳ ಬಳಿ ವಿಚಾರಿಸಿ ನಿಮ್ಮ ಜೇಬಿಗೆ ಹೆಚ್ಚು ಭಾರವನ್ನುಂಟು ಮಾಡದ ಪ್ಲಂಬರ್‌ನ್ನು ಆಯ್ಕೆ ಮಾಡಿಕೊಂಡು ಅವರಿಗೆ ಕೆಲಸವನ್ನು ಒಪ್ಪಿಸಿ.

►ಸಿಂಕ್‌ನಲ್ಲಿ ಎಣ್ಣೆಯ ಜಿಡ್ಡನ್ನು ಹಾಕಬೇಡಿ

ಖಾದ್ಯಗಳನ್ನು ಕರಿದ ಬಳಿಕ ಉಳಿದ ಎಣ್ಣೆಯ ಜಿಡ್ಡನ್ನು ಸಿಂಕ್‌ನಲ್ಲಿ ಸುರಿಯುವುದು ಮೂರ್ಖತನದ ಕೆಲಸವಾಗುತ್ತದೆ. ಜಿಡ್ಡಿನಲ್ಲಿರುವ ಕೊಬ್ಬು ಕೊಳವೆಗಳಿಗೆ ಅಂಟಿಕೊಂಡು, ಕ್ರಮೇಣ ಸಿಂಕ್‌ನಿಂದ ನೀರು ಹೊರಹೋಗದ ಹಾಗೆ ಮಾಡುತ್ತದೆ.

►ಡ್ರಾಪ್-ಇನ್ ಟಾಯ್ಲೆಟ್ ಫ್ರೆಷ್ನರ್‌ಗಳನ್ನು ಬಳಸಬೇಡಿ

ಡ್ರಾಪ್-ಇನ್ ಫ್ರೆಷ್ನರ್‌ಗಳು ಅಥವಾ ಟಾಯ್ಲೆಟ್‌ನ್ನು ಫ್ಲಷ್ ಮಾಡುವ ನೀರಿನ ಟ್ಯಾಂಕಿನಲ್ಲಿ ಹಾಕುವ ಫ್ರೆಷ್ನರ್‌ಗಳು ಕಮೋಡ್‌ನ್ನು ಸ್ವಚ್ಛಗೊಳಿಸಲು ಸುಲಭದ ಉಪಾಯವಾಗಿರಬಹುದು,ಆದರೆ ಅವು ಟ್ಯಾಂಕನೊಳಗಿನ ಭಾಗಗಳಿಗೆ ಹೆಚ್ಚಿನ ಹಾನಿಯನ್ನೂ ಉಂಟು ಮಾಡಬಲ್ಲವು. ಫ್ರೆಷ್ನರ್ ಟ್ಯಾಬ್ಲೆಟ್‌ನಲ್ಲಿರುವ ಕ್ಲೋರಿನ್ ಕರಗಿದಾಗ ಅದು ಗ್ಯಾಸ್ಕೆಟ್‌ಗಳು ಮತ್ತು ವಾಷರ್‌ಗಳಿಗೆ ತುಕ್ಕು ಹಿಡಿಯುವಂತೆ ಮಾಡುತ್ತದೆ. ಹೀಗಾಗಿ ಇಂತಹ ಫ್ರೆಷ್ನರ್‌ಗಳನ್ನು ಬಳಸುವ ಬದಲು ಬ್ರಷ್‌ನಿಂದ ಕಮೋಡ್ ತಿಕ್ಕುವ ಹಳೆಯ ಪದ್ಧತಿಯೇ ಒಳ್ಳೆಯದು.

►ವಾಷಿಂಗ್ ಮಷಿನ್ ಮತ್ತು ಡಿಷ್ ವಾಷರ್‌ಗಳ ಮೆದುಗೊಳವೆಗಳು

ವಾಷಿಂಗ್ ಮಷಿನ್ ಮತ್ತು ಡಿಷ್ ವಾಷರ್‌ನ ಹೋಸ್ ಅಥವಾ ಮೆದುಗೊಳವೆ ಸುಮಾರು ಐದು ವರ್ಷ ಬಾಳಿಕೆ ಬರುತ್ತದೆ ಮತ್ತು ಅದೊಂದು ದಿನ ಏಕಾಏಕಿಯಾಗಿ ಒಡೆಯುವವರೆಗೂ ಹಾನಿಯ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಮೆದುಗೊಳವೆಯನ್ನು ಬಹಳ ಸಮಯದಿಂದ ಬದಲಿಸಿರದಿದ್ದರೆ ಅದನ್ನು ಬದಲಿಸುವ ಮನಸ್ಸು ಮಾಡಿ ಮತ್ತು ಸಂಭಾವ್ಯ ಸಮಸ್ಯೆಯನ್ನು ನಿವಾರಿಸಿ.

►ವಾಟರ್ ಹೀಟರ್

ಸಾಂಪ್ರದಾಯಿಕ ವಾಟರ್ ಹೀಟರ್ 8ರಿಂದ 12 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದರೆ ಟ್ಯಾಂಕ್‌ರಹಿತ ಮಾದರಿಗಳು ಸುಮಾರು 20 ವರ್ಷ ಬಾಳಿಕೆ ಬರಬಹುದು. ನಿಮ್ಮ ಬಳಿ ಯಾವುದೇ ವಾಟರ್ ಹೀಟರ್ ಇರಲಿ,ಅದರ ಜೀವಿತಾವಧಿ ಮುಗಿದಿದ್ದರೂ ಬದಲಿಸದಿದ್ದರೆ ಅದು ದುಬಾರಿಯಾದ ಸೋರಿಕೆಗೆ ಕಾರಣವಾಗಬಹುದು ಮತ್ತು ವಿದ್ಯುತ್ ಬಳಕೆಯು ಹೆಚ್ಚುತ್ತದೆ. ವಾಟರ್ ಹೀಟರ್‌ನ ಕ್ಷಮತೆ ಕುಸಿಯುತ್ತಿದೆ ಎನ್ನುವುದನ್ನು ಸೂಚಿಸುವ ನೀರಿನ ಉಷ್ಣತೆ ಕಡಿಮೆಯಾಗುವುದು ಅಥವಾ ಶಬ್ದಗಳು ಕೇಳುಬರುವುದು ಇತ್ಯಾದಿ ಸಂಕೇತಗಳ ಬಗ್ಗೆ ಗಮನವಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News