ಚೀನಾ: 17 ಹೊಸ ಸಾರ್ಸ್‌ನಂಥ ಸೋಂಕು ಪತ್ತೆ

Update: 2020-01-19 16:57 GMT

ಬೀಜಿಂಗ್, ಜ. 19: ಚೀನಾದಲ್ಲಿ ಹೊಸದಾಗಿ ನಿಗೂಢ ಸಾರ್ಸ್ ಮಾದರಿಯ ವೈರಸ್ ಸೋಂಕಿನ 17 ಪ್ರಕರಣಗಳು ವರದಿಯಾಗಿವೆ ಹಾಗೂ ಈ ಪೈಕಿ ಮೂವರು ರೋಗಿಗಳ ಪರಿಸ್ಥಿತಿ ಗಂಭೀರವಾಗಿದೆ.

ಮಾರಕ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಕಾಯಿಲೆಯೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ನೂತನ ಕೊರೋನವೈರಸ್ ಮಾದರಿಯ ಸೋಂಕು ಕಳವಳಕ್ಕೆ ಕಾರಣವಾಗಿದೆ. 2002-03ರ ಅವಧಿಯಲ್ಲಿ ಸಾರ್ಸ್ ಕಾಯಿಲೆಯು ಚೀನಾ ಮತ್ತು ಹಾಂಕಾಂಗ್‌ನಲ್ಲಿ ಸುಮಾರು 650 ಮಂದಿಯ ಸಾವಿಗೆ ಕಾರಣವಾಗಿತ್ತು.

ಚೀನಾದ ಮಧ್ಯ ಭಾಗದ ನಗರ ವುಹಾನ್‌ನಲ್ಲಿ ನೂತನ 17 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮೂರು ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವುಹಾನ್ ರೋಗ ಪ್ರಸಾರದ ಕೇಂದ್ರ ಬಿಂದು ಎಂಬುದಾಗಿ ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News