ಫೇಸ್‌ಬುಕ್‌ನಲ್ಲಿ ಜಿನ್‌ಪಿಂಗ್ ಹೆಸರೂ, ಆಕ್ಷೇಪಾರ್ಹ ಪದವೂ !

Update: 2020-01-19 17:18 GMT

ಯಾಂಗನ್ (ಮ್ಯಾನ್ಮಾರ್), ಜ. 19:ಫೇಸ್‌ಬುಕ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಹೆಸರು ಭಾಷಾಂತರಗೊಂಡಾಗ ಹೇಗೆ ಆಕ್ಷೇಪಾರ್ಹ ಪದವಾಗುತ್ತದೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಫೇಸ್‌ಬುಕ್ ಇಂಕ್ ಶನಿವಾರ ಹೇಳಿದೆ ಹಾಗೂ ಇದರಿಂದಾಗಿ ಉಂಟಾಗಿರಬಹುದಾದ ಸಂಧಿಗ್ಧತೆಗೆ ಕ್ಷಮೆ ಕೋರಿದೆ.

ಚೀನಾ ಅಧ್ಯಕ್ಷರ ಮ್ಯಾನ್ಮಾರ್ ಭೇಟಿಯ ಎರಡನೇ ದಿನ ಈ ತಪ್ಪು ಬೆಳಕಿಗೆ ಬಂದಿದೆ. ಚೀನಾ ಅಧ್ಯಕ್ಷರ ಹೆಸರನ್ನು ಬರ್ಮೀಸ್ ಭಾಷೆಯಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದಾಗ ಆಕ್ಷೇಪಾರ್ಹ ಪದ ಹುಟ್ಟುತ್ತದೆ.

ಮ್ಯಾನ್ಮಾರ್‌ನ ಸರಕಾರಿ ಸಲಹೆಗಾರ್ತಿ ಆಂಗ್ ಸಾನ್ ಸೂ ಕಿಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಜಿನ್‌ಪಿಂಗ್ ಭೇಟಿಗೆ ಸಂಬಂಧಿಸಿ ಹಾಕಲಾದ ಹೇಳಿಕೆಯಲ್ಲಿ ಈ ಭಾಷಾಂತರ ಪ್ರಮಾದವನ್ನು ಎತ್ತಿ ತೋರಿಸಲಾಗಿದೆ.

‘‘ಫೇಸ್‌ಬುಕ್‌ನಲ್ಲಿ ಬರ್ಮೀಸ್ ಭಾಷೆಯಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡುವಾಗ ಕಾಣಿಸಿಕೊಂಡಿರುವ ಸಮಸ್ಯೆಯನ್ನು ಸರಿಪಡಿಸಿದ್ದೇವೆ ಹಾಗೂ ಅದು ಮರುಕಳಿಸದಂತೆ ನೋಡಿಕೊಳ್ಳಲು ಅದರ ಕಾರಣವನ್ನು ಪತ್ತೆಹಚ್ಚುತ್ತಿದ್ದೇವೆ’’ ಎಂದು ಫೇಸ್‌ಬುಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News