ಯೆಮನ್: ಬಂಡುಕೋರರಿಂದ ಕ್ಷಿಪಣಿ ದಾಳಿ; 70 ಸೈನಿಕರ ಸಾವು

Update: 2020-01-19 17:35 GMT

ದುಬೈ, ಜ. 19: ಯೆಮನ್‌ನ ಮಧ್ಯದ ನಗರ ಮರಿಬ್‌ನಲ್ಲಿರುವ ಮಸೀದಿಯೊಂದರ ಮೇಲೆ ಹೌದಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 70 ಯೆಮನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮತ್ತು ಸೇನಾ ಮೂಲಗಳು ರವಿವಾರ ತಿಳಿಸಿವೆ.

ಯೆಮನ್ ರಾಜಧಾನಿ ಸನಾದಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ಮರೀಬ್‌ನ ಸೇನಾ ಶಿಬಿರವೊಂದರಲ್ಲಿರುವ ಮಸೀದಿಯ ಮೇಲೆ ಶನಿವಾರ ಸಂಜೆಯ ಪ್ರಾರ್ಥನೆಯ ವೇಳೆ ಹೌದಿಗಳು ದಾಳಿ ನಡೆಸಿದರು ಎಂದು ಸೇನಾ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಯೆಮನ್‌ನ ಅಂತರ್‌ರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವು ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ 2014ರಿಂದ ಹೋರಾಡುತ್ತಿದೆ. 2014ರಲ್ಲಿ ಬಂಡುಕೋರರು ಉತ್ತರದ ರಾಜಧಾನಿ ಸನಾವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ದಾಳಿಯಲ್ಲಿ ಕನಿಷ್ಠ 70 ಸೈನಿಕರು ಹತರಾಗಿದ್ದಾರೆ ಎಂದು ಮರೀಬ್ ನಗರದ ಆಸ್ಪತ್ರೆಯೊಂದರ ವೈದ್ಯಕೀಯ ಮೂಲವೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News