ಪಾಲಕ್ಕಾಡ್‌ನಲ್ಲಿ ಫುಟ್ಬಾಲ್ ಮೈದಾನದ ತಾತ್ಕಾಲಿಕ ಗ್ಯಾಲರಿ ಕುಸಿತ: 50 ಮಂದಿಗೆ ಗಾಯ

Update: 2020-01-20 04:50 GMT

ಪಾಲಕ್ಕಾಡ್, ಜ.20: ಇಲ್ಲಿನ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ಪ್ರಾರಂಭವಾಗುವ ಮುನ್ನ ತಾತ್ಕಾಲಿಕ ಗ್ಯಾಲರಿ ಕುಸಿದು ಬಿದ್ದ ಪರಿಣಾಮವಾಗಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಫುಟ್ಬಾಲ್ ದಂತಕಥೆಗಳಾದ ಐಎಂ ವಿಜಯನ್ ಮತ್ತು ಭೈಚುಂಗ್ ಭುಟಿಯಾ  ಈ ಘಟನೆಗೆ ಸಾಕ್ಷಿಯಾಗಿ ಕ್ರೀಡಾಂಗಣದಲ್ಲಿದ್ದರು.ಅವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 29 ರಂದು ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣ್  ನಲ್ಲಿ ಅಖಿಲ ಭಾರತ ಸೆವೆನ್ಸ್ ಪಂದ್ಯಾವಳಿಯ  ಹೃದಯಾಘಾತದಿಂದ  ಮೃತಪಟ್ಟ ಫುಟ್ಬಾಲ್ ಆಟಗಾರ ಆರ್ ಧನರಾಜನ್ ಅವರ ಕುಟುಂಬಕ್ಕೆ ಸಹಾಯ ಮಾಡಲು ನಿಧಿಸಂಗ್ರಹಣೆ  ಈ ಉದ್ದೇಶಕ್ಕಾಗಿ ಈ ಪಂದ್ಯವನ್ನು ಆಯೋಜಿಸಲಾಗಿತ್ತು.

ತಾತ್ಕಾಲಿಕ ಗ್ಯಾಲರಿ ಕುಸಿದು ಬಿದ್ದ ಪರಿಣಾಮವಾಗಿ  ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ  ದಾಖಲಿಸಲಾಗಿದೆ. ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಲಕ್ಕಾಡ್ ಸಂಸದ ವಿ ಕೆ ಶ್ರೀಕಂಠನ್, "ಈ ದುರದೃಷ್ಟಕರ ಘಟನೆ ಪಂದ್ಯಕ್ಕೆ ಸ್ವಲ್ಪ ಮುಂಚೆ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾರಿಗೂ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ವಯಂಸೇವಕರು ಗಾಯಾಳುಗಳಿಗೆ ಸಹಾಯ ಮಾಡಲು ಸಮನ್ವಯ ಸಾಧಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News