ಕ್ರಿಕೆಟ್ ಬೆಟ್ಟಿಂಗ್ : 11 ಮಂದಿಯನ್ನು ಬಂಧಿಸಿದ ದಿಲ್ಲಿ ಪೊಲೀಸರು

Update: 2020-01-20 07:04 GMT

ಹೊಸದಿಲ್ಲಿ, ಜ.20:  ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದ ವೇಳೆ ರವಿವಾರ ರಾಜಧಾನಿಯಲ್ಲಿ ಬೆಟ್ಟಿಂಗ್ ದಂಧೆ ನಡೆಸಿದ್ದ 11 ಆರೋಪಿಗಳನ್ನು  ದಿಲ್ಲಿ ಕ್ರೈಂ ಬ್ರಾಂಚ್ ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಪೊಲೀಸರು   70 ಮೊಬೈಲ್ ಫೋನ್, ಎರಡು ಟಿವಿ ಮತ್ತು ಏಳು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ  ಅಂತರದಲ್ಲಿ ಜಯ ಗಳಿಸಿತ್ತು.  ಭಾರತ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿತು.  ಸುಮಾರು 2 ಕೋಟಿ ರೂ. ಮೊತ್ತದ  ಬೆಟ್ಟಿಂಗ್ ನಡೆದಿದೆ ಎಂದು ಪೊಲಿಸರು ಗುಮಾನಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News