ಮಾಲಿನ್ಯ: ಬ್ಯಾಂಕಾಕ್‌ನ 450 ಶಾಲೆಗಳು ಬಂದ್

Update: 2020-01-22 16:58 GMT

ಬ್ಯಾಂಕಾಕ್ (ಥಾಯ್ಲೆಂಡ್), ಜ. 22: ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಏರಿದ ಬಳಿಕ, ಬುಧವಾರ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ 450 ಶಾಲೆಗಳನ್ನು ಮುಚ್ಚಲು ಅಧಿಕಾರಿಗಳು ಆದೇಶ ನೀಡಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಬ್ಯಾಂಕಾಕ್ ನಗರದ ಪಿಎಮ್ 2.5 ಕಣಗಳ ಮಟ್ಟವು 78.3ಪಿಜಿ/ಎಂ3ಗೆ ಏರಿದೆ. 35ಕ್ಕಿಂತ ಹೆಚ್ಚಿನ ಮಟ್ಟವು ಅಪಾಯಕಾರಿ ಎಂಬುದಾಗಿ ಪರಿಗಣಿಸಲಾಗಿದೆ.

ಈ ಕಣಗಳು ಧೂಳು, ಮಸಿ ಮತ್ತು ಹೊಗೆ ಆಗಿರಬಹುದು ಹಾಗೂ ಅವುಗಳು ಎಷ್ಟು ಚಿಕ್ಕದಾಗಿವೆಯೆಂದರೆ ಅವುಗಳು ಶ್ವಾಸಕೋಶದೊಳಗೆ ಆಳವಾಗಿ ಇಳಿಯಬಲ್ಲವು ಹಾಗೂ ರಕ್ತಪರಿಚಲನಾ ವ್ಯೆಹವನ್ನು ಸೇರಬಲ್ಲವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News